Advertisement

Champions Trophy: ಭಾರತ ತಂಡಕ್ಕೆ ಆಯ್ಕೆಯಾಗುವ ವಿಕೆಟ್‌ಕೀಪರ್ ಗಳಿಬ್ಬರು ಯಾರು?

01:09 PM Jan 15, 2025 | Team Udayavani |

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆ ಭಾರತ ಮತ್ತು ಪಾಕಿಸ್ಥಾನ ಮಾತ್ರ ಇನ್ನೂ ತಮ್ಮ ತಂಡಗಳನ್ನು ಘೋಷಿಸಿಲ್ಲ. ತಾತ್ಕಾಲಿಕ ತಂಡಗಳನ್ನು ಸಲ್ಲಿಸಲು ಐಸಿಸಿ ಜನವರಿ 12ರ ಗಡುವನ್ನು ವಿಧಿಸಿದ್ದು ಆರ್ಹ ಆರು ಇತರ ರಾಷ್ಟ್ರಗಳು ತಂಡಗಳನ್ನು ಘೋಷಿಸಿವೆ.

Advertisement

ಭಾರತ ತಂಡವನ್ನು ಅಂತಿಮಗೊಳಿಸಲು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಈ ವಾರಾಂತ್ಯದಲ್ಲಿ ಸಭೆ ಸೇರಲಿದ್ದು ಇಬ್ಬರು ವಿಕೆಟ್‌ಕೀಪರ್‌ಗಳ ಆಯ್ಕೆ ಅತ್ಯಂತ ಸವಾಲಿನದ್ದಾಗುವ ಸಾಧ್ಯತೆಯಿದೆ. ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಗಳಿಗೆ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಸ್ಪರ್ಧೆಯಲ್ಲಿದ್ದಾರೆ. ಕೆ.ಎಲ್.ರಾಹುಲ್ ಏಕದಿನ ಪಂದ್ಯಗಳಲ್ಲಿ ಭಾರತದ ಸ್ಥಾಪಿತ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದರೆ, ಪಂತ್ ಮತ್ತು ಸ್ಯಾಮ್ಸನ್ ಪ್ರಬಲ ಪರ್ಯಾಯವಾಗಿ ಗೋಚರಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿರುವ ಇಶಾನ್ ಕಿಶನ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ವಿಜಯ್ ಹಜಾರೆ ಟ್ರೋಫಿಯಲ್ಲಿರು ಈಶಾನ್ಯ ರಾಜ್ಯಗಳ ವಿರುದ್ಧ ಒಂದು ಶತಕ ಸೇರಿದಂತೆ ಏಳು ಪಂದ್ಯಗಳಲ್ಲಿ 316 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ 2023 ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ.

ಈಗ ತಂಡದ ವಿಚಾರದಲ್ಲಿ ಬಹಳಷ್ಟು ಬದಲಾಗಿದ್ದು, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಅವರ ಬ್ಯಾಕ್-ಅಪ್ ಆಗಿ ಧ್ರುವ್ ಜುರೆಲ್ ಅವರನ್ನುಭಾರತ ಆಯ್ಕೆ ಮಾಡಿದೆ.

ಪಂತ್ ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ಏಕದಿನ ಪಂದ್ಯಗಳಲ್ಲಿ ಆದ್ಯತೆಯ ವಿಕೆಟ್‌ಕೀಪರ್ ಆಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. 2023ರಲ್ಲಿ 27 ಏಕದಿನ ಪಂದ್ಯಗಳಲ್ಲಿ 1,060 ರನ್ ಗಳಿಸಿದ್ದರು.

Advertisement

ಪಂತ್ ಅವರ ಒಟ್ಟಾರೆ ಏಕದಿನ ಸಾಧನೆ ಗಮನಿಸಿದರೆ, 33.50ರ ಸರಾಸರಿಯಲ್ಲಿ 871 ರನ್ ಗಳಿಸಿದ್ದಾರೆ. ರಾಹುಲ್ 72 ಇನ್ನಿಂಗ್ಸ್‌ಗಳಲ್ಲಿ 49.15 ಸರಾಸರಿಯಲ್ಲಿ 2,851 ರನ್ ಗಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಪಂತ್ ಅವರು ಚಾಂಪಿಯನ್ಸ್ ಟ್ರೋಫಿಗೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಭಾಗವಾಗಿರುವ ಸಂಜು ಸ್ಯಾಮ್ಸನ್ ಅವರು ರೇಸ್ ನಲ್ಲಿದ್ದು, ಅವರು 2023 ಡಿಸೆಂಬರ್ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪರ್ಲ್‌ನಲ್ಲಿ ಕೊನೆಯ ಏಕದಿನ ಪಂದ್ಯಆಡಿ ಶತಕ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.