Advertisement
ಕೂಟದ ಸ್ಪರ್ಧಾತ್ಮಕ ಹೋರಾಟವು ಪಂದ್ಯ ಆರಂಭವಾದ ತತ್‌ಕ್ಷಣವೇ ಇತರ ಕೂಟಗಳಿಗಿಂತ ಉನ್ನತ ಮಟ್ಟದಲ್ಲಿರುತ್ತದೆ. ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲಿ ನಾವು ಪಂದ್ಯಗಳನ್ನು ಆಡುತ್ತೇವೆ ಮತ್ತು ಎರಡನೇ ಹಂತದಲ್ಲಿ ಹೋರಾಟ ತೀವ್ರಗೊಳ್ಳುತ್ತದೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಗಲ್ಲ. ಪಂದ್ಯ ಒಂದರಿಂದಲೇ ನಾವು ಶ್ರೇಷ್ಠ ಮಟ್ಟದ ಆಟ ನೀಡಬೇಕಾಗಿದೆ. ನಾವು ಅಂತಹ ನಿರ್ವಹಣೆ ನೀಡದಿದ್ದರೆ ಮುನ್ನಡೆಯುವ ನಮ್ಮ ಅವಕಾಶ ಕ್ಷೀಣಿಸುತ್ತದೆ ಎಂದು ಟೀಮ್ ಇಂಡಿಯಾ ಲಂಡನ್‌ಗೆ ತೆರಳುವ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2013ರಲ್ಲಿ ನಮ್ಮ ತಂಡ ಸಂಘಟಿತವಾಗಿ ಉತ್ತಮ ಸಾಧನೆಗೈದ ಕಾರಣ ಗೆಲುವು ಸಾಧಿಸಿದೆವು. ಹಾಲಿ ತಂಡದಲ್ಲಿ ಕೆಲವು ಬದಲಾವಣೆಗಳಿರಬಹುದು. ಆದರೆ ನಮ್ಮ ಮನಃಸ್ಥಿತಿಯಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ. ಅಲ್ಲಿಗೆ ಹೋಗಿ ನಮ್ಮ ಕ್ರಿಕೆಟ್ ಆಟವನ್ನು ಆನಂದಿಸುವುದು ನಮ್ಮ ಯೋಜನೆ. ಅಂತಹ ಮನಃಸ್ಥಿತಿಯಿದ್ದರೆ ಉನ್ನತ ಹಂತಕ್ಕೆ ನಾವು ತಲುಪುವ ಸಾಧ್ಯತೆ ಯಿದೆ. ಗೆಲುವಿನ ಹಸಿವು ಮತ್ತು ಎಲ್ಲ ಮಾದರಿಯಲ್ಲೂ ಮೇಲುಗೈ ಸಾಧಿಸಲು ನಾವು ಬಯಸಿದ್ದೇವೆ ಎಂದು ಕೊಹ್ಲಿ ವಿವರಿಸಿದರು. ತಂಡದಲ್ಲಿರುವ ಇಬ್ಬರು ಹಿರಿಯ ಆಟಗಾರರಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಆಕರ್ಷಕ ಶೈಲಿಯ ಯುವರಾಜ್ ಸಿಂಗ್ ಮುಕ್ತ ಮನಸ್ಸಿ ನಿಂದ ಆಡುವ ನಿರೀಕ್ಷೆಯನ್ನು ಕೊಹ್ಲಿ ಇಟ್ಟು ಕೊಂಡಿ ದ್ದಾರೆ. ಅವರಿಬ್ಬರು ಅಪಾರ ಅನುಭವ ಹೊಂದಿದವರು. ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಮುಕ್ತವಾಗಿ ಆಡಲು ಸ್ವಾತಂತ್ರ್ಯ ನೀಡಿದರೆ ತಂಡಕ್ಕೆ ಗೆಲುವು ಒದಗಿಸಿಕೊಡುವ ಅಥವಾ ಒಳ್ಳೆಯ ಜತೆಯಾಟ ಸಂಘಟಿಸುವ ಅಥವಾ ಕಠಿನ ಪರಿಸ್ಥಿತಿಯಲ್ಲೂ ಎದುರಾಳಿ ತಂಡವನ್ನು ಹೇಗೆ ಉರುಳಿಸುವ ಕುರಿತು ಅವರಿಗೆ ಒಳ್ಳೆಯ ಜ್ಞಾನವಿದೆ ಎಂದು ಕೊಹ್ಲಿ ತಿಳಿಸಿದರು.
Related Articles
Advertisement
ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲಿ ನಾವು ಪಂದ್ಯಗಳನ್ನು ಆಡುತ್ತೇವೆ ಮತ್ತು ಎರಡನೇ ಹಂತ ದಲ್ಲಿ ಹೋರಾಟ ತೀವ್ರ ಗೊಳ್ಳುತ್ತದೆ. ಆದರೆ ಚಾಂಪಿಯನ್ಸ್ ಟ್ರೋಫಿ ಯಲ್ಲಿ ಹಾಗಲ್ಲ. ಪಂದ್ಯ ಒಂದರಿಂದಲೇ ನಾವು ಶ್ರೇಷ್ಠ ಮಟ್ಟದ ಆಟ ನೀಡಬೇಕಾಗಿದೆ.
– ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ