Advertisement

ಮಾಗಡಿ ಅಕಾಡೆಮಿ ವಿರುದ್ಧ ಚಾಂಪಿಯನ್ಸ್ ನೆಟ್‌ಗೆ ಸರಣಿ

03:42 PM Oct 18, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಸಂತೋಷನಗರದ ಖೀಮಜಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಬೆಂಗಳೂರಿನ ಮಾಗಡಿ ಕ್ರಿಕೆಟ್‌ ಅಕಾಡೆಮಿ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಹುಬ್ಬಳ್ಳಿಯ ಚಾಂಪಿಯನ್ಸ್ ನೆಟ್‌ ಕ್ರಿಕೆಟ್‌ ಕೋಚಿಂಗ್‌ ಸೆಂಟರ್‌ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತು.

Advertisement

ಮೊದಲ ಪಂದ್ಯದಲ್ಲಿ ಚಾಂಪಿಯನ್ಸ್ ನೆಟ್‌ 24.4 ಓವರ್‌ಗಳಲ್ಲಿ 10 ವಿಕೆಟ್‌ ಕಳೆದುಕೊಂಡು 94 ರನ್‌ ಕಲೆ ಹಾಕಿತು. ತೇಜಸ್‌ ವಿವೇಕ್‌ 3 ವಿಕೆಟ್‌, ರತನ್‌ ಬಿ.ಆರ್‌., ಆಕರ್ಷ ಹಾಗೂ ಪ್ರತೋಷ ತಲಾ 2 ವಿಕೆಟ್‌ ಪಡೆದರು. ನಂತರ ಬ್ಯಾಟ್‌ ಮಾಡಿದ ಮಾಗಡಿ ಕ್ರಿಕೆಟ್‌ ಅಕಾಡೆಮಿ 12.4 ಓವರ್‌ಗಳಲ್ಲಿ 5 ವಿಕೆಟ್‌ಗೆ 96 ರನ್‌ ಪೇರಿಸುವ ಮೂಲಕ ಜಯ ಸಾಧಿಸಿತು. ಜಯನ್‌ 32 ರನ್‌ ಗಳಿಸಿದರು.

ಎರಡನೇ ಪಂದ್ಯದಲ್ಲಿ ಮಾಗಡಿ ಕ್ರಿಕೆಟ್‌ ಅಕಾಡೆಮಿ ತಂಡ 33.2 ಓವರ್‌ಗಳಲ್ಲಿ 10 ಕಳೆದುಕೊಂಡು 210 ರನ್‌ ಪೇರಿಸಿತು. ರಾಘವ ಮುದಗಲ್‌ 59 ರನ್‌ ಪೇರಿಸಿದರು. ಸುಪರ್ಶ ಕರ್ನೆ ಹಾಗೂ ಸುಪ್ರಿತ್‌ ಜಮನೂರ ತಲಾ 2 ವಿಕೆಟ್‌ ಕಬಳಿಸಿದರು. ನಂತರ ಬ್ಯಾಟ್‌ ಮಾಡಿದ ಚಾಂಪಿಯನ್ಸ್ ನೆಟ್‌ ತಂಡ 36.1 ಓವರ್‌ಗಳಲ್ಲಿ 6 ವಿಕೆಟ್‌ಗೆ 214 ರನ್‌ ಗಳಿಸುವ ಮೂಲಕ ಜಯದ ಮಾಲೆ ಧರಿಸಿತು. ಹೆತ್‌ ಪಟೇಲ್‌ ಅಜೇಯ 91 ರನ್‌ ಪೇರಿಸಿ ತಂಡದ ಗೆಲುವಿಗೆ ಕಾರಣರಾದರು. ಕ್ರಿಶ್‌ರಾವ್‌ 4 ವಿಕೆಟ್‌ ಪಡೆದರು.

ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಾಗಡಿ ಕ್ರಿಕೆಟ್‌ ಅಕಾಡೆಮಿ ತಂಡ 31.4 ಓವರ್‌ಗಳಲ್ಲಿ 10 ವಿಕೆಟಿಗೆ 115 ರನ್‌ ಪೇರಿಸಿತು. ತಂಡದ ಪರ ರಕ್ಷಿತ್‌.ಎಸ್‌ 26, ಜಯನ್‌ ಸಂಯೋಗಮ್‌ 25 ರನ್‌ ಪೇರಿಸಿದರು. ಸುಪ್ರೀತ್‌ ಜಮನೂರ್‌ 3 ವಿಕೆಟ್‌, ವೇದ ಪಂಜಿ ಹಾಗೂ ರಮೇಶ ಬಾಗೇವಾಡಿ ತಲಾ 2 ವಿಕೆಟ್‌ ಪಡೆದರು. ನಂತರ ಬ್ಯಾಟ್‌ ಮಾಡಿದ ಚಾಂಪಿಯನ್ಸ್ ನೆಟ್‌ ತಂಡ 23.1 ಓವರ್‌ಗಳಲ್ಲಿ 4 ವಿಕೆಟ್‌ಗೆ 116 ರನ್‌ ಪೇರಿಸಿ ಜಯಬೇರಿ ಬಾರಿಸಿತು. ಹೆತ್‌ ಪಟೇಲ್‌ 48, ವೇದ ಪಂಜಿ 32 ರನ್‌ ಗಳಿಸಿದರು. ಕ್ರಿಶ್‌ ರಾವ್‌ 2 ವಿಕೆಟ್‌ ಕಬಳಿಸಿದರು.

ಅತ್ಯುತ್ತಮ ಬ್ಯಾಟ್ಸ್‌ಮನ್‌ ಪ್ರಣವ್‌ ಎನ್‌., ಅತ್ಯುತ್ತಮ ಬೌಲರ್‌ ಕ್ರಿಶ್‌ ರಾವ್‌, ಅತ್ಯುತ್ತಮ ಭರವಸೆ ಆಟಗಾರ ವೇದ್‌ ಪಂಜಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹೆತ್‌ ಪಟೇಲ್‌ ಮುಡಿಗೇರಿಸಿಕೊಂಡರು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು. ತರಬೇತುದಾರ ಎಂ.ಜಿ. ಆರ್ಮುಗಂ, ರತಿಲಾಲ್‌ ಪಟೇಲ್‌, ಡಾ| ಲಿಂಗರಾಜ ಬಿಳೇಕಲ್‌, ಸಂದೇಶ ಬೈಲಪ್ಪನವರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next