Advertisement

‘ಚಾಂಪಿಯನ್‌’ ಓಟ ಶುರು; ಹೀರೋ ಬರ್ತ್‌ಡೇಗೆ ಇಂಟ್ರೋಡಕ್ಷನ್‌ ಸಾಂಗ್

01:05 PM Jun 11, 2022 | Team Udayavani |

ಸದ್ಯ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ಜೊತೆಗೆ ಹೊಸಬರ ಸಿನಿಮಾಗಳು ಕೂಡಾ ಸದ್ದು ಮಾಡುತ್ತಿವೆ. ಕೆಲವು ಸಿನಿಮಾಗಳು ಬಿಡುಗಡೆಯಾದ ನಂತರ ಗಮನ ಸೆಳೆದರೆ, ಇನ್ನು ಕೆಲವು ಸಿನಿಮಾಗಳು ಬಿಡುಗಡೆಗೆ ಮುನ್ನವೇ ಪ್ರೇಕ್ಷಕನ ಕುತೂಹಲಕ್ಕೆ ಕಾರಣವಾಗುತ್ತವೆ. ಈಗ ಆ ಸಾಲಿಗೆ ಸೇರುವ ಸಿನಿಮಾ “ಚಾಂಪಿಯನ್‌’.

Advertisement

ಹೊಸಬರ ತಂಡ ಸೇರಿಕೊಂಡು ಮಾಡಿರುವ ಈ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌, ಹಾಡು ಹಿಟ್‌ ಆಗಿದ್ದು, ಈಗ ಚಿತ್ರತಂಡ ಮತ್ತೂಂದು ಹಾಡು ಬಿಡುಗಡೆ ಮಾಡಲು ಮುಂದಾಗಿದೆ. ಅದಕ್ಕೆ ಕಾರಣ ನಾಯಕ ನಟನ ಬರ್ತ್‌ಡೇ.

ಹೌದು, ಈ ಚಿತ್ರದಲ್ಲಿ ಸಚಿನ್‌ ಧನ್‌ಪಾಲ್‌ ನಾಯಕರಾಗಿ ನಟಿಸಿದ್ದು, ಜೂ.12 ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹೀರೋ ಇಂಟ್ರೊಡಕ್ಷನ್‌ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಅಂದಹಾಗೆ, ಇದು ಇಂದಿನ ಯುವಕರಿಗೆ ಸ್ಫೂರ್ತಿ ನೀಡುವ ಹಾಡಾಗಿದ್ದು, ಎಲ್ಲರಿಗೂ ಇಷ್ಟವಾಗುವ ವಿಶ್ವಾಸವಿದೆ

ಅಂದಹಾಗೆ, ನಾಯಕ ಸಚಿನ್‌ ಸೇನೆ ಹಿನ್ನೆಲೆ ಇರುವ ಕುಟುಂಬದಿಂದ ಬಂದವರು. ಸೇನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳವು ಆಸೆ ಈಡೇರದಿದ್ದಾಗ, ಬೆಂಗಳೂರಿಗೆ ಬಂದು ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಸ್ಥರಾಗಿದ್ದರು. ಜೊತೆಯಲ್ಲಿ ಚಿತ್ರರಂಗದ ನಂಟು ಬೆಸೆದ ಅವರು 2019 ರಲ್ಲಿ ನಟರಾದರು. ನಟನಾಗುವ ಮೊದಲು ಜಬರ್ದಸ್ತ್ ತಯಾರಿ ನಡೆಸಿದ್ದ ಸಚಿನ್‌, ನಿರ್ದೇಶಕರ ಒಂದು ಮಾತಿಗೆ 95 ಕೆಜಿಯಿಂದ 73 ಕೆಜಿಗೆ ತೂಕ ಇಳಿಸಿದ್ದಾರೆ. ಬರೋಬ್ಬರಿ 22 ಕೆಜಿ ತೂಕ ಇಳಿಸುವ ಮೂಲಕ, ಚಿತ್ರದೆಡೆಗೆ ತಮಗಿರುವ ನಿಷ್ಠೆಯನ್ನು ಸಾಬೀತುಪಡಿಸಿದ್ದರು.

“ಚಾಂಪಿಯನ್‌’ ಕ್ರೀಡಾ ಕಥೆಯುಳ್ಳ ಚಿತ್ರವಾಗಿದ್ದು, ಓರ್ವ ಹಳ್ಳಿಯುವಕ ಅಂತಾರಾಷ್ಟ್ರೀಯ ಕ್ರೀಡಾ ಪಟುವಾಗುವ ಕಠಿಣ ಹಾದಿಯನ್ನು ಚಿತ್ರಿಸಲಾಗಿದೆ. ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದ್ದು ಯುವಕರಿಗೆ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನನ್ನಾದರು ಸಾಧಿಸಲು ಇದು ಸ್ಫೂರ್ತಿಯಾಗಲಿದೆ ಎಂಬುದು ಚಿತ್ರತಂಡದ ಮಾತು.

Advertisement

ಇದನ್ನೂ ಓದಿ:ಕೃಷ್ಣನ ‘ದಿಲ್ ಪಸಂದ್’; ಜೂ.12ಕ್ಕೆ ಚಿತ್ರದ ಫ‌ಸ್ಟ್‌ ಗ್ಲಿಂಪ್ಸ್

“ಚಾಂಪಿಯನ್‌’ ಒಂದು ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಚಿತ್ರವಾಗಿದೆ. ಚಿತ್ರದಲ್ಲಿ ರೊಮ್ಯಾನ್ಸ್‌, ಫ್ಯಾಮಿಲಿ ಸೆಂಟಿಮೆಂಟ್‌, ಹಾಗೂ ಬರಪೋರ್‌ ಕಾಮಿಡಿ ದೃಶ್ಯಗಳು ಇದ್ದು, ಜನಕ್ಕೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಚಿತ್ರತಂಡದ ವಿಶ್ವಾಸ.

ಶಿವಾನಂದ ಎಸ್‌ ನೀಲಣ್ಣನವರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶಾಹುರಾಜ್‌ ಶಿಂಧೆ ನಿರ್ದೇಶನ, ಬಿ ಅಜನೀಶ್‌ ಲೋಕನಾಥ್‌ ಸಂಗೀತ, ನಾಗಾರ್ಜುನ್‌ ಶರ್ಮಾ, ಶಿವು ಬೆರಗಿ, ಪ್ರೇಮ ಅಭಿಮಾನ್‌ ಸಾಹಿತ್ಯ, ವೆಂಕಟೇಶ್‌ ಸಂಕಲನ ಚಿತ್ರಕ್ಕಿದೆ.

ನಾಯಕನಾಗಿ ಸಚಿನ್‌ ಧನ್‌ಪಾಲ್‌, ನಾಯಕಿ ಅದಿತಿ ಪ್ರಭುದೇವಾ ಅಭಿನಯಿಸಿದ್ದು, ದೇವರಾಜ್‌, ರಂಗಾಯಣ ರಘು, ಚಿಕ್ಕಣ್ಣ, ಗಿರೀಶ್‌, ಆದಿ ಲೊಕೇಶ್‌, ಶೋಭ್‌ರಾಜ್‌, ಅವಿನಾಶ್‌, ಪ್ರದೀಪ್‌ ರಾವತ್‌ ಎಂಬ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next