Advertisement

ಚಂಪಾ ಸಾಹಿತ್ಯ ಸೇವೆ ಸರಣೀಯ: ಗುರುಮಹಾಂತ ಶ್ರೀ

05:55 PM Jan 13, 2022 | Team Udayavani |

ಇಳಕಲ್ಲ: ಚಂಪಾ ಅವರ ಸಾಹಿತ್ಯಸೇವೆ ಸ್ಮರಣೀಯವಾಗಿದ್ದು, ಇಳಕಲ್ಲ ಶ್ರೀಮಠ ಹಾಗೂ ಲಿಂ| ಡಾ| ಮಹಾಂತಸ್ವಾಮಿಗಳೊಂದಿಗೆ ಆತ್ಮೀಯತೆ ಯುಳ್ಳವರಾಗಿದ್ದರು ಎಂದು ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀ ಹೇಳಿದರು.

Advertisement

ನಗರದ ವಿಜಯಮಹಾಂತೇಶ್ವ ಸಂಸ್ಥಾನಮಠದಲ್ಲಿ ನಡೆದ ಸಾಹಿತಿ ಡಾ| ಚಂದ್ರಶೇಖರ ಪಾಟೀಲ, ಉತ್ತರ ಕರ್ನಾಟಕದ ಉತ್ತಮ ಜಾನಪದ ಸಂಗೀತಗಾರ ಬಸವಲಿಂಗಪ್ಪ ಹಿರೇಮಠ ಅವರಿಗೆ ಶ್ರದ್ದಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೈಚಾರಿಕತೆಯ ಮೇರು ಪರ್ವತವಾಗಿದ್ದ ಡಾ| ಚಂದ್ರಶೇಖರ ಪಾಟೀಲ ಹಾಗೂ ಉತ್ತರ ಕರ್ನಾಟಕದ ಭಾಗದ ಮೇರು ಜನಪದ ಸಾಹಿತಿ ಬಸವಲಿಂಗಪ್ಪ ಹಿರೇಮಠ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯಲೋಕದ ಕೊಂಡಿ ಕಳಚಿದಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರದ ಜನಪದಗಾರುಡಿಗ ಶಂಭು ಬಳಿಗಾರ ಮಾತನಾಡಿ, ಕವಿಯಾಗಿ ನಾಟಕಕಾರರಾಗಿ ನಾಲ್ಕು ದಶಕಗಳ ಕಾಲ ಹೆಸರು ಮಾಡಿರುವ ಪ್ರೊ| ಚಂದ್ರಶೇಖರ ಪಾಟೀಲ ಗೋಕಾಕ ಚಳವಳಿ ಸೇರಿ ಅನೇಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೆರೆಮನೆ ವಾಸ ವನ್ನೂ ಅನುಭವಿಸಿದ್ದರು.ಅಪರೂಪದ ವಿದ್ವತ್ತಿನ ಮೂಲಕ ಸಾಹಿತ್ಯಾಸಕ್ತ ಮನಸ್ಸುಗಳನ್ನು ಸದಾ ಕ್ರಿಯಾಶೀಲಗೊಳಿಸುತ್ತಿದ್ದ ಅಪರೂಪದ ಆಕರ್ಷ ಣೆಯ ಸಾಹಿತಿಗಳಾಗಿದ್ದರು ಎಂದು ಹೇಳಿದರು.

ಶಿರೂರಿನ ಡಾ| ಬಸವಲಿಂಗ ಸ್ವಾಮೀಜಿ, ವಿಶ್ವನಾಥ ವಂಶಾಕೃತಮಠ, ಮಹಾಂತೇಶ ಗಜೇಂದ್ರಗಡ, ಮಹಾದೇವ ಕಂಬಾರ, ಸಂಗಣ್ಣ ಗದ್ದಿ, ಎಂ.ಬಿ. ಒಂಟಿ, ಮಹಾಬಳೇಶ್ವರ ಮೃಟದ, ರಾಜೇಂದ್ರ ಜುಂಜಾ, ಗೊಪಿ ಕಠಾರೆ, ಪ್ರಭು ಬನ್ನಿಗೊಳ, ಡಿ.ಜಿ. ಸಜ್ಜನ, ಪಿ.ಎಸ್‌. ಪಮ್ಮಾರ, ಮುತ್ತು ಬೀಳಗಿ, ಗಿರಿಜಾ ಶಿವಬಲ್ಲ, ಸುನೀತಾ ಅಂಗಡಿ, ಸವಿತಾ ಮಾಟೂರ, ವೀರಮ್ಮ ಕುಂಬಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next