Advertisement
ಅಷ್ಟೇ ಅಲ್ಲದೆ, ಕೆಚ್ಚಲು ಕಳೆದುಕೊಂಡಿರುವ 3 ಹಸುಗಳ ಬದಲಿಗೆ ಹೊಸದಾಗಿ 3 ಹಸು ಕೊಡುವುದಾಗಿ ಭರವಸೆ ನೀಡಿರುವ ಸಚಿವ ಜಮೀರ್ ಖಾನ್ ವಿರುದ್ಧವೂ ಬಿಜೆಪಿ ಕಿಡಿಕಾರಿದ್ದು, ಎಲ್ಲವನ್ನೂ ವಸ್ತುಗಳಂತೆ ಭಾವಿಸುವವರಿಗೆ ಮಾತ್ರ ಹೀಗೆಲ್ಲ ಮಾತನಾಡಲು ಸಾಧ್ಯ. ಅಷ್ಟಿದ್ದರೆ, ನಿಜವಾದ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಿ ಎಂದು ಸವಾಲು ಹಾಕಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಿಂದೂಗಳಿಗೆ ಘಾಸಿಯಾಗುವ ಘಟನೆ ನಡೆದಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲೇ ಹಸುಗಳ ಕೆಚ್ಚಲು ಕೊಯ್ದಿದ್ದು, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ವಹಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದೆ. ಈಗ ಕಾಟಾಚಾರಕ್ಕಾಗಿ ಒಬ್ಬನನ್ನು ಬಂಧಿಸಿದ್ದು, ಈತ ಬಿಹಾರದಿಂದ ಬಂದವನು ಎನ್ನಲಾಗಿದೆ. ಆದರೆ, ಈತ ಇದೇ ಊರಿನಲ್ಲಿ 10 ವರ್ಷಗಳಿಂದ ನೆಲೆಸಿದ್ದು, ಆತನ ಅಣ್ಣನಿಗೆ ಫ್ಯಾಕ್ಟರಿ ಕೂಡ ಇದೆ. ಪೊಲೀಸರು ಈತನನ್ನು ವಿಚಾರಣೆ ಮಾಡಿ, ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಮಾಡಬೇಕಿತ್ತು ಎಂದರು. ಪ್ರಕರಣದ ಹಿಂದೆ ಒಬ್ಬನಿಲ್ಲ, ಗ್ಯಾಂಗ್ ಇದೆ:
ಈ ಘಟನೆಯಲ್ಲಿ ಒಬ್ಬನೇ ವ್ಯಕ್ತಿಯ ಕೈವಾಡವಿಲ್ಲ, ಯಾವುದೋ ಗ್ಯಾಂಗ್ ಈ ಕೆಲಸ ಮಾಡಿದೆ. ಅದರ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ಮಾಡಬೇಕಿತ್ತು. ಇಲ್ಲಿ ಪಶು ಆಸ್ಪತ್ರೆಯ ಜಾಗವಿದ್ದು, ಅದನ್ನು ವಕ್ಫ್‌ಗೆ ನೀಡಲು ಪ್ರಯತ್ನ ನಡೆದಿತ್ತು. ಸುಮಾರು 500 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಲೂಟಿ ಮಾಡಲು ನಕಲಿ ದಾಖಲೆಗಳನ್ನು ಸರ್ಕಾರ ಸೃಷ್ಟಿ ಮಾಡಿತ್ತು. ಅದರ ವಿರುದ್ಧ ಹೋರಾಟ ಮಾಡಿದ ಕರ್ಣ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಹಸು ನೀಡುವುದರಿಂದ ಪರಿಹಾರ ಸಿಗಲ್ಲ. ಇದಕ್ಕೆ ನ್ಯಾಯ ಸಿಗಬೇಕಿದೆ ಎಂದು ಆಗ್ರಹಿಸಿದರು.
Related Articles
Advertisement
ಹಿಂದೂಗಳಿಗೆ ದೊಡ್ಡ ಆಘಾತ: ಭಾಸ್ಕರ ರಾವ್ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್, ಒತ್ತಡದ ಕಾರಣದಿಂದ ಪ್ರಕರಣಕ್ಕೆ ಸಂಬಂಧವಿಲ್ಲದ ಬಿಹಾರಿಯೊಬ್ಬನನ್ನು ಬಂಧಿಸಿ ಸಾಕ್ಷಿ ಸೃಷ್ಟಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆತನನ್ನು ಹುಚ್ಚ ಎಂದೂ ಹೇಳಲಾಗುತ್ತಿದೆ. ಇವೆಲ್ಲವೂ ಆ ಭಾಗದಲ್ಲಿನ ಹಿಂದೂಗಳಿಗೆ ಬೆದರಿಕೆ ಒಡ್ಡಲೆಂದೇ ಮಾಡಿರುವ ಕೃತ್ಯ. ನಿಜವಾದ ಆರೋಪಿಗಳನ್ನು ಬಿಟ್ಟು ಹುಚ್ಚನನ್ನು ಬಂಧಿಸಿದ್ದೇಕೆ? ಈ ಘಟನೆಯಿಂದ ಹಿಂದೂಗಳಿಗೆ ದೊಡ್ಡ ಆಘಾತವಾಗಿದೆ. ರಾಜ್ಯ ಸರ್ಕಾರದ ಅದೃಷ್ಟ ಚೆನ್ನಾಗಿತ್ತು. ಯಾವುದೇ ರಕ್ತಪಾತ ಆಗಿಲ್ಲ. ಕೋಮುದಂಗೆಗೆ ಅವಕಾಶವಿತ್ತು. ಇಷ್ಟೆಲ್ಲಾ ಆದರೂ ಪೊಲೀಸರು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 153ರ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು. ಕೆಟ್ಟ ಪರಂಪರೆಗೆ ನಾಂದಿ
ಹಸುಗಳ ಕೆಚ್ಚಲು ಕೊಯ್ಯುವ ಘನಂದಾರಿ ಕೆಲಸ ಯಾರು ಮಾಡಿದ್ದಾರೆ ಎಂಬುದನ್ನು ಮೊದಲು ಬಯಲಿಗೆ ತರಬೇಕು. ಯಾರೋ ಒಬ್ಬನನ್ನು ಬಂಧಿಸಿ ಪ್ರಕರಣ ಮುಚ್ಚಿ ಹಾಕುವ ಕೆಲಸದಂತೆ ಅನಿಸುತ್ತಿದೆ. ಈ ದುಷ್ಕೃತ್ಯಕ್ಕೆ ಪ್ರೇರಣೆ ಯಾರು? ಓಲೈಕೆ ರಾಜಕಾರಣದಿಂದ ಈ ರಾಜ್ಯದಲ್ಲಿ ಏನಾಗುತ್ತಿದೆ? ಇವುಗಳನ್ನು ನಾವು ಗಮನಿಸಬೇಕಿದೆ. ಇದೊಂದು ಕೆಟ್ಟ ಪರಂಪರೆಗೆ ಕಾಂಗ್ರೆಸ್ ಸರ್ಕಾರ ನಾಂದಿ ಹಾಕಿದೆ. ಇಲ್ಲಿ ಸಂಪೂರ್ಣವಾಗಿ ಕಾನೂನು- ಸುವ್ಯವಸ್ಥೆ ಕೆಟ್ಟು ಹೋಗಿದೆ.
-ಛಲವಾದಿ ನಾರಾಯಣಸ್ವಾಮಿ, ಮೇಲ್ಮನೆ ಪ್ರತಿಪಕ್ಷ ನಾಯಕ ಇಂದು ಹಸುವಿನ ಮಾಲಕನ ಮನೆಯಲ್ಲಿ ಬಿಜೆಪಿ ಸಂಕ್ರಾಂತಿ
ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಿಯೋಗ ಹಸುವಿನ ಮಾಲಕನ ಮನೆಗೆ ಮಂಗ ಳ ವಾರ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಲಿದೆ. ಈ ವೇಳೆ ಬಿಜೆಪಿ ನಾಯಕರು ಸಂಕ್ರಾಂತಿ ಹಬ್ಬದ ಅಂಗವಾಗಿ ಗೋ ಪೂಜೆ ನೆರವೇರಿಸಿ ಪರಿಹಾರ ವಿತರಣೆ ಮಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ, ಸಂಸದ ಪಿ.ಸಿ. ಮೋಹನ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕಾಟನ್ ಪೇಟೆ ದಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಹಸುವಿನ ಮಾಲಕನ ಮನೆಗೆ ಭೇಟಿ ನೀಡಲಿದ್ದಾರೆ.
ಕಾನೂನು ಪ್ರಕಾರ ಕ್ರಮ ಆಗಲಿದೆ
ಈ ಘಟನೆ ಖಂಡನೀಯ. ಕಾನೂನು ಪ್ರಕಾರ ಕ್ರಮ ಆಗಲಿದೆ. ಗೋಮಾತೆಗೆ, ಮೂಕಪ್ರಾಣಿ ಮೇಲೆ ತೋರುವ ಪ್ರೀತಿಯನ್ನು ಬಿಜೆಪಿಯವರು ಅಪ್ರಾಪೆ¤ಯರು, ದಲಿತ ಹೆಣ್ಣುಮಕ್ಕಳ ಮೇಲೆಯೂ ತೋರುವುದು ಒಳ್ಳೆಯದು. ನಿಮ್ಮ ನಾಯಕರು ಒಕ್ಕಲಿಗ, ದಲಿತ ಹೆಣ್ಣುಮಕ್ಕಳ ನಿಂದನೆ ಮಾಡಿದ್ದಾರೆ. ಅಪ್ರಾಪ್ತೆಯರನ್ನು ಬಳಸಿಕೊಳ್ಳುತ್ತಾರೆ. ಹಾಸನದ ಮಹಿಳೆಯರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಇದರ ಬಗ್ಗೆಯೂ ಧ್ವನಿ ಎತ್ತಿ. – ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ