Advertisement

ಚಾಮರಾಜನಗರ: ಸೂರ್ಯನ ಸುತ್ತ ಉಂಗುರ, ಆಗಸದಲ್ಲಿ ಕೌತುಕದ ವಿದ್ಯಮಾನ

06:49 PM May 04, 2022 | Team Udayavani |

ಚಾಮರಾಜನಗರ: ನಗರದ ಜನತೆ ಆಕಾಶದಲ್ಲಿ ಅಪರೂಪದ ವಿದ್ಯಮಾನವನ್ನು ವೀಕ್ಷಿಸಿದರು. ಸೂರ್ಯನ ಸುತ್ತ ವೃತ್ತಾಕಾರದ ಉಂಗುರವನ್ನು ನೋಡಿ ಪುಳಕಿತರಾದರು.

Advertisement

ನಗರದಲ್ಲಿ ಬೆಳಿಗ್ಗೆ 11.15ರ ಸಮಯದಲ್ಲಿ ಹಲವು ನಿಮಿಷಗಳ ಕಾಲ ಸೂರ್ಯನ ಸುತ್ತ ಪ್ರಭಾವಳಿಯಂತಹ ಉಂಗುರ ಕಂಡ ಬಂತು. ಹಲವಾರು ಮಂದಿ ಕುತೂಹಲಿಗಳು ಈ ವಿದ್ಯಮಾನವನ್ನು ವೀಕ್ಷಿಸಿದರು.

ಬೆಳಕಿನ ವಕ್ರೀಭವನ: ಇದಕ್ಕೆ ಬೆಳಕಿನ ವಕ್ರೀಭವನ ಕಾರಣ ಎಂದು ಖಗೋಳ ತಜ್ಞರು ಹೇಳುತ್ತಾರೆ. ವಾತಾವರಣದಲ್ಲಿ ಹಿಮ ಇದ್ದಾಗ, ಅದರ ಹರಳುಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು, ವಕ್ರೀಭವನ ಹೊಂದುತ್ತವೆ ಅರ್ಥಾತ್ ಬಾಗುತ್ತವೆ. 20 ಸಾವಿರ ಅಡಿ ಎತ್ತರದಲ್ಲಿ ಮೋಡಗಳಿದ್ದು, ಆ ಮೋಡಗಳು ಅತಿ ಸೂಕ್ಷ್ಮ ಹಿಮದ ಹರಳುಗಳನ್ನು ಹೊಂದಿರುತ್ತವೆ.

ವಿಜ್ಞಾನಿಗಳು ಇದನ್ನು 22 ಡಿಗ್ರಿ ಉಂಗುರ ಎಂದೂ ಕರೆಯುತ್ತಾರೆ. ಈ ಉಂಗುರಗಳು ಸೂರ್ಯನ ಸುತ್ತ ಸುಮಾರು 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತವೆ ಎಂದು ಖಗೋಳ ತಜ್ಞರು ಹೇಳುತ್ತಾರೆ. ಈ ರೀತಿಯ ಉಂಗುರ ಚಂದ್ರನ ಸುತ್ತಲೂ ಆಗಾಗ ಸೃಷ್ಟಿಯಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next