ಚಾಮರಾಜನಗರ: ತಾಲೂಕಿನ ಕಿಲಗೆರೆ ಸಮೀಪದ ಬೇಲದಕುಪ್ಪೆ ಗ್ರಾಮದಲ್ಲಿ ಪತ್ನಿಯ ಹತ್ಯೆ ಮಾಡಿದ ಪತಿ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ.
ಕಿಲಗೆರೆ ಗ್ರಾಮದ ಮಹದೇವಪ್ಪ (55 ವ) ಎಂಬಾತ ತನ್ನ ಪತ್ನಿ ಮಹದೇವಮ್ಮ(45 ವ)ಳನ್ನು ಹತ್ಯೆ ಮಾಡಿ ತೆರಕಣಾಂಬಿ ಠಾಣೆಗೆ ಶರಣಾದ ಆರೋಪಿಯಾಗಿದ್ದಾನೆ.
ಕಿಲಗೆರೆ ಹಾಗೂ ಮಾದಲವಾಡಿ ಗ್ರಾಮದ ನಡುವೆ ಇರುವ ಬೇಲದಕುಪ್ಪೆಯ ಜಮೀನೊಂದರಲ್ಲಿ ವಾಸವಾಗಿದ್ದ ಇವರ ನಡುವೆ ಇಂದು ಮುಂಜಾನೆ 6 ಗಂಟೆ ವೇಳೆ ಏಕಾಏಕಿ ಜಗಳ ನಡೆದಿದೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಸ್ನಾನದ ಮನೆಯಲ್ಲಿದ್ದ ಪತ್ನಿ ಮಹದೇವಮ್ಮರನ್ನು ಪತಿ ಮಹದೇವಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ನಂತರ ತೆರಕಣಾಂಬಿ ಪೊಲೀಸ್ ಠಾಣೆಗೆ ಆರೋಪಿ ಮಹದೇವಪ್ಪ ಶರಣಾಗಿದ್ದಾನೆ.
ಇದನ್ನೂ ಓದಿ:ಮಹತ್ವದ ನಿರ್ಧಾರ: 424 ಮಂದಿಯ ಭದ್ರತೆಯನ್ನು ವಾಪಸ್ ಪಡೆದ ಪಂಜಾಬ್ ಸರ್ಕಾರ
Related Articles
ಚಾಮರಾಜನಗರ ಗ್ರಾಮಾಂತರ ಪೊಲೀಸರು ಮೃತದೇಹವನ್ನು ಚಾಮರಾಜನಗರ ಮೆಡಿಕಲ್ ಬೋಧನಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿ ಕೇಸು ದಾಖಲಿಸಿದ್ದಾರೆ.