Advertisement

5 ವರ್ಷದ ಮಗಳ ಮೇಲೆ ಮಲ ತಂದೆಯಿಂದಲೇ ಅತ್ಯಾಚಾರ : ಆರೋಪಿಯ ಬಂಧನ

08:39 PM Jan 05, 2022 | Team Udayavani |

ಚಾಮರಾಜನಗರ: ಮಲತಂದೆಯೇ 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಆರೋಪಿಯ ವಿರುದ್ಧ ಆತನ ಹೆಂಡತಿ ದೂರು ನೀಡಿದ್ದಾರೆ. ಘಟನೆ ಎಸಗಿರುವ ಆರೋಪಿ ಬಾಲಕಿಯ ತಾಯಿಯ ಎರಡನೇ ಗಂಡನಾಗಿದ್ದಾನೆ. ಮೊದಲ ಗಂಡನ ಕಿರುಕುಳ ತಾಳಲಾರದೇ ಆತನಿಂದ ಎರಡು ವರ್ಷಗಳ ಹಿಂದೆ ಡೈವೋರ್ಸ್ ಪಡೆದಿದ್ದ ಮಹಿಳೆ ಆರೋಪಿಯೊಡನೆ ಮರು ವಿವಾಹವಾಗಿದ್ದರು. ಆಕೆಗೆ ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ.

ಆರೋಪಿ ಮೂಲತಃ ಮೈಸೂರಿನವನಾಗಿದ್ದು, ಈತ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಈತನ ಕಿರುಕುಳ ತಾಳಲಾರದೇ ಮಹಿಳೆ ನಗರದಲ್ಲಿರುವ ತಂದೆಯ ಮನೆಗೆ ಬಂದಿದ್ದರು. ಗಂಡನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರನ್ನೂ ನೀಡಿದ್ದರು. ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ನಂತರ ಈರ್ವರೂ ನಗರದಲ್ಲೇ ಮನೆಮಾಡಿಕೊಂಡು ವಾಸಿಸುತ್ತಿದ್ದರು.

ಹೆಂಡತಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮುಖ ತೊಳೆಯುತ್ತಿದ್ದ 5 ವರ್ಷದ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ತಾಯಿ ಮನೆಗೆ ಬಂದಾಗ ಮಗು ಅಳುತ್ತಿತ್ತು. ಮಗುವನ್ನು ವಿಚಾರಿಸಿದಾಗ ನಡೆದ ಘಟನೆ ವಿವರಿಸಿದೆ. ನಂತರ ಆಕೆ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣ ಠಾಣೆ ಸಬ್ ಇನ್‌ಸ್ಪೆಕ್ಟರ್ ಮಹದೇವಶೆಟ್ಟಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ : ವಾರಾಂತ್ಯ ಕರ್ಫ್ಯೂ: ಸಿಇಟಿ ದಾಖಲಾತಿ ಪರಿಶೀಲನೆ ವೇಳಾಪಟ್ಟಿ ಬದಲು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next