Advertisement

ಚಾಮರಾಜನಗರ :16 ಮಂದಿಗೆ ಕೋವಿಡ್ ಸೋಂಕು ದೃಢ! 15 ಮಂದಿ ಗುಣಮುಖ

07:35 PM Nov 01, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 16 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 15 ಮಂದಿ ಗುಣಮುಖರಾಗಿದ್ದಾರೆ. ಓರ್ವ ವೃದ್ಧರು ಮೃತಪಟ್ಟಿದ್ದಾರೆ.

Advertisement

ಚಾಮರಾಜನಗರ ತಾಲೂಕು ರೇಚಂಬಳ್ಳಿ ಗ್ರಾಮದ 85 ವರ್ಷದ ವೃದ್ಧರು ಅ. 20ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅ. 31ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಒಟ್ಟು 5980 ಮಂದಿ ಸೋಂಕಿಗೊಳಗಾಗಿದ್ದಾರೆ. ಇವರಲ್ಲಿ 5628 ಮಂದಿ ಗುಣಮುಖರಾಗಿದ್ದಾರೆ. 228 ಸಕ್ರಿಯ ಪ್ರಕರಣಗಳಿವೆ. 105 ಮಂದಿ ಕೋವಿಡ್‌ನಿಂದ 19 ಮಂದಿ ಕೋವಿಡ್ ಅಲ್ಲದ ಕಾರಣದಿಂದ ಮೃತಪಟ್ಟಿದ್ದಾರೆ. 40 ಮಂದಿ ಐಸಿಯುನಲ್ಲಿದ್ದಾರೆ. 129 ಮಂದಿ ಹೋಂ ಐಸೋಲೇಷನ್‌ಲ್ಲಿದ್ದಾರೆ.

ಭಾನುವಾರ 1029 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಇದರಲ್ಲಿ 16 ಮಾತ್ರ ಪಾಸಿಟಿವ್ ಬಂದಿದೆ. ಚಾಮರಾಜನಗರ ತಾಲೂಕಿನಿಂದ 4, ಗುಂಡ್ಲುಪೇಟೆ ತಾಲೂಕಿನಿಂದ 8, ಕೊಳ್ಳೇಗಾಲ ತಾಲೂಕಿನಿಂದ 3, ಯಳಂದೂರು ತಾಲೂಕಿನಿಂದ 1 ಪ್ರಕರಣ ವರದಿಯಾಗಿದೆ.

ಇದನ್ನೂ ಓದಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಸೇವೆಗೆ ವಿಧಿಸಿದ್ದ ನಿರ್ಬಂಧ ಸಡಿಲಿಕೆ : ಡಿಸಿ ಆದೇಶ

Advertisement

ಇಂದಿನ ಪ್ರಕರಣಗಳು: 16
ಇಂದು ಗುಣಮುಖ: 15
ಒಟ್ಟು ಗುಣಮುಖ: 5628
ಇಂದಿನ ಸಾವು: 01
ಒಟ್ಟು ಸಾವು: 124
ಸಕ್ರಿಯ ಪ್ರಕರಣಗಳು: 228
ಒಟ್ಟು ಸೋಂಕಿತರು: 5980

Advertisement

Udayavani is now on Telegram. Click here to join our channel and stay updated with the latest news.

Next