ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 24 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಓರ್ವ ಮೃತಪಟ್ಟಿದ್ದು, 59 ಮಂದಿ ಗುಣಮುಖರಾಗಿದ್ದಾರೆ. 456 ಸಕ್ರಿಯ ಪ್ರಕರಣಗಳಿವೆ.
ನಗರದ 60 ವರ್ಷದ ವೃದ್ಧರು ಆ. 17ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.
ಪತ್ತೆಯಾಗಿರುವ ಹೊಸ ಪ್ರಕರಣಗಳ ಪೈಕಿ 17 ಚಾಮರಾಜನಗರ ತಾಲೂಕಿನಿಂದ, 04 ಗುಂಡ್ಲುಪೇಟೆ ತಾಲೂಕು, 02 ಕೊಳ್ಳೇಗಾಲ 1 ಹೊರಜಿಲ್ಲೆಯಿಂದ ವರದಿಯಾಗಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2039ಕ್ಕೇರಿದೆ. ಇದರಲ್ಲಿ 1547 ಮಂದಿ ಗುಣಮುಖರಾಗಿದ್ದಾರೆ. ಭಾನುವಾರ 102 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಹಾಗಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ. 22 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 207 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 36 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇಂದಿನ ಪ್ರಕರಣಗಳು – 24
ಇಂದು ಗುಣಮುಖ – 59
ಒಟ್ಟು ಗುಣಮುಖ – 1547
ಇಂದಿನ ಸಾವು – 1
ಒಟ್ಟು ಸಾವು – 36
ಸಕ್ರಿಯ ಪ್ರಕರಣಗಳು – 456
ಒಟ್ಟು ಸೋಂಕಿತರು – 2039