Advertisement

ಚಾಮರಾಜನಗರ ನಂದು.. ಇಲ್ಲಿ ಯಾರೇ ಬರಬೇಕಾದರೂ ನನ್ನ ಪರ್ಮಿಷನ್ ಪಡೆದೇ ಬರಬೇಕು. . . !

07:55 PM Jun 25, 2022 | Team Udayavani |

ಚಾಮರಾಜನಗರ : ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಜೋಗಯ್ಯ ಚಿತ್ರದ ಸಂಭಾಷಣೆಯನ್ನು ಸ್ವಲ್ಪ ಬದಲಾವಣೆ ಮಾಡಿ, ತಮ್ಮ ತವರೂರು ಚಾಮರಾಜನಗರಕ್ಕೆ ಬದಲಿಸಿಕೊಂಡು ಡೈಲಾಗ್ ಹೇಳುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನರು ಹೋ.. ಎಂದು ಹರ್ಷೋದ್ಗಾರ ಮಾಡಿದರು. ಸಿಳ್ಳೆಗಳು ಮೊಳಗಿದವು, ಶಿವಣ್ಣಂಗೆ ಜೈ , ಪುನೀತ್ ಗೆ ಜೈ ಎಂಬ ಜೈಕಾರಗಳು ತಾರಕಕ್ಕೇರಿದವು.

Advertisement

ಭೈರಾಗಿ ಚಿತ್ರದ ಪೂರ್ವಭಾವಿ ಸಮಾರಂಭ (ಪ್ರಿ ಇವೆಂಟ್) ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಕರುನಾಡ ಚಕ್ರವರ್ತಿ, ನಟ ಡಾ. ಶಿವರಾಜ್‌ಕುಮಾರ್ ಅವರು ಚಾಮರಾಜನಗರ ನಂದು ಎಂದು ಹೇಳುವ ಮೂಲಕ ತವರೂರಿನ ಅಭಿಮಾನ ಮೆರೆದರು.

ಶಿವಣ್ಣ ಆಗಮನದ ಹಿನ್ನೆಲೆಯಲ್ಲಿ ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿ ಬಳಗ ಹಾಗೂ ಅವರ ಸಾವಿರಾರು ಅಭಿಮಾನಿಗಳು ಭೈರಾಗಿ ಚಿತ್ರತಂಡವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಜೆಸಿಬಿ ಮೂಲಕ ಬೃಹತ್ ಗಾತ್ರದ ಸುಮಾರು 200 ಕೆ.ಜಿಯ ಸೇಬಿನ ಹಾರ ಹಾಕಲಾಯಿತು. ಅಲ್ಲದೇ ಅಭಿಮಾನಿಗಳು ನೆಚ್ಚಿನ ನಟನಿಗೆ ಪುಷ್ಪ ವೃಷ್ಟಿ ಮಾಡುವ ಮೂಲಕ ಸಂಭ್ರಮಿಸಿದರು.

ಇದನ್ನೂ ಓದಿ : ವಿಜಯಪುರ ಲೋಕ ಅದಾಲತ್ ನಲ್ಲಿ ಒಂದಾದ ವಕೀಲರ ಕುಟುಂಬ: 10 ಸಾವಿರ ಪ್ರಕರಣ ಇತ್ಯರ್ಥ

ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಿವರಾಜ್ ಕುಮಾರ್, ಪೇಪರ್ ಮ್ಯಾಲ್ ಬರ್ಕೋ ಚಾಮರಾಜನಗರ ನಂದು ಎಂದು ಡೈಲಾಗ್ ಹೇಳುತ್ತಿದ್ದಂತೆ ನೆರೆದಿದ್ದ ನೂರಾರು ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದರು. ಅಲ್ಲದೇ ಭೈರಾಗಿ ಚಿತ್ರದ ಡೈಲಾಗ್ ಹೇಳಿದರು.

Advertisement

ನಂತರ ನಟ ಡಾಲಿ ಧನಂಜಯ್ ಅವರು ಟಗರು ಚಿತ್ರದ ಅಂಕಲ್‌ನ ಹೊಡಿತೀನಿ ಸುಬ್ಬಿ ಎಂಬ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದರು. ಈ ಸಂದರ್ಭದಲ್ಲಿ ನಟ ಪೃಥ್ವಿ ಅಂಬರ್ ಸಹ ಇದ್ದರು.

ನಂತರ ನಟ ಶಿವರಾಜ್ ಕುಮಾರ್ ಹಾಗೂ ಭೈರಾಗಿ ಚಿತ್ರತಂಡ ಗಾಜನೂರಿನತ್ತ ಪ್ರಯಾಣ ಬೆಳೆಸಿತು.

ಕಿಕ್ಕಿರಿದು ಸೇರಿದ ಜನರು: ಚಾಮರಾಜನಗರಕ್ಕೆ ನಟ ಶಿವರಾಜ್ ಕುಮಾರ್ ಆಗಮನದ ಸುದ್ದಿ ತಿಳಿದಿದ್ದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನಗರದ ಸಂತೇಮರಹಳ್ಳಿ ವೃತ್ತದಲ್ಲಿ ನೆರೆದಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ಒಂದು ಗಂಟೆಗೂ ಹೆಚ್ಚು ಕಾಲ ವೃತ್ತದಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಕೆಲವು ಸಮಯ ವೃತ್ತದ ಮೂಲಕ ವಾಹನಗಳು ಚಲಿಸಲಾಗದೇ, ಟ್ರಾಫಿಕ್ ಜಾಮ್ ಆಯಿತು.

ನಟ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ ಬರುತ್ತಿದ್ದಂತೆ ಶಿವರಾಜ್‌ಕುಮಾರ್, ಪುನೀತ್, ಧನಂಜಯ್ ಎಂದು ಜೈಕಾರ ಕೂಗಿದರು. ಪಟಾಕಿ ಸಿಡಿಸಿ ಹಬ್ಬದಂತೆ ಸಂಭ್ರಮಿಸಿದರು. ಈ ವೇಳೆ ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರಲ್ಲದೇ, ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next