Advertisement

Chamarajanagar; ಜಾತಿ ಗಣತಿ ವರದಿ ಬಹಿರಂಗಪಡಿಸಲು ಎಸ್‌ಡಿಪಿಐ ಒತ್ತಾಯ

05:52 PM Oct 10, 2023 | Team Udayavani |

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಡೆಸಲಾಗಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಅದರ ವರದಿಯನ್ನು ಬಹಿರಂಗಪಡಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್ ಒತ್ತಾಯಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ಸಾರ್ವಜನಿಕಗೊಳಿಸಬೇಕು. ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೂ ಮಣಿಯಬಾರದು. ಈ ಸಂಬಂಧ ಅ.13ರವರೆಗೆ ಐದು ದಿನಗಳ ಕಾಲ ಎಸ್‌ಡಿಪಿಐ ವತಿಯಿಂದ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಅ.12 ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಅಲ್ಲದೇ ಅ.13 ರಂದು ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದರು.

2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಜಾತಿ ಗಣತಿ ನಡೆಸಿ, ಅದರಲ್ಲೂ ಜನಸಂಖ್ಯಾವಾರು ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗೆ ಆದೇಶ ನೀಡಿತ್ತು. ಸಮೀಕ್ಷೆಯನ್ನು 2015ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಟ್ಟು 1.6 ಲಕ್ಷ ಸಿಬ್ಬಂದಿ ನಡೆಸಿದ್ದರು. ಕರ್ನಾಟಕದಲ್ಲಿ 1.3 ಕೋಟಿ ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಟ್ಟು 187 ಕೋಟಿ ಖರ್ಚು ಮಾಡಿತ್ತು ಎಂದು ತಿಳಿಸಿದರು.

ವಿವಿಧ ಆಯೋಗಗಳು ನೀಡಿರುವ ವರದಿಗಳ ಅನ್ವಯ ಸರ್ಕಾ ರವು ಮುಸ್ಲಿಮರಿಗೆ ಶೇ.8 ರಷ್ಟು ಮೀಸಲಾತಿ ಏರಿಕೆ ಮಾಡಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾಹ್ ಅಹಮ್ಮದ್ ಆಗ್ರಹಿಸಿದರು.

Advertisement

ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.18ರಷ್ಟಿದೆ. ಆದ್ದರಿಂದ 2ಬಿ ಮೀಸಲಾತಿಯ ಪ್ರಮಾಣವನ್ನು ಕನಿಷ್ಟ ಶೇ.8ಕ್ಕೆ ಏರಿಕೆ ಮಾಡ ಬೇಕು. ರಾಜ್ಯ ಸರ್ಕಾರ ಕೂಡ ಲೇ ಮುಸ್ಲಿಂರ 2ಬಿ ಮೀಸಲಾತಿ ರದ್ದತಿಯ ಬಿಜೆಪಿ ಸರ್ಕಾರದ ಶಿಫಾರಸ್ಸನ್ನು ರದ್ದು ಮಾಡಿ ಕೋರ್ಟ್ ದಾವೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ಸಮುದಾಯ ಅತ್ಯಂತ ಹಿಂದುಳಿದಿದೆ ಎಂದಿರುವ ರಂಗನಾಥ್ ಮಿಶ್ರ ತಮ್ಮ ವರದಿಯಲ್ಲಿ ಮುಸ್ಲಿಂರಿಗೆ ಈಗ ಲಭ್ಯವಿರುವ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಪ್ರತಿಪಾದಿ ಸಿತ್ತು. ಮುಸ್ಲಿಂರ 2ಬಿ ಮೀಸಲಾ ತಿಯನ್ನು ಶೇ.4ರಿಂದ ಶೇ.8ಕ್ಕೆ ಏರಿಸಬೇಕು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಬಿಸಿ ವರ್ಗದಿಂದ ಮುಸ್ಲಿಂರನ್ನು ಹೊರಗಿಡಲು ನಿರ್ಧರಿಸಿ 2ಬಿ ಕೆಟಗರಿಯಡಿಯಲ್ಲಿ ಮುಸ್ಲಿಂರಿಗೆ ನೀಡಲಾಗಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತ್ತು ಎಂದರು.

ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲೂ ಸರ್ಕಾರದ ಈ ನಿರ್ಧಾರದ ವಿರುದ್ಧ ದಾವೆ ಹೂಡಲಾಗಿತ್ತು. ಮುಸ್ಲಿಂರನ್ನು ಒಬಿಸಿ ಪಟ್ಟಿಯಿಂದ ಕೈ ಬಿಟ್ಟಿರುವುದು ಸಂವಿಧಾನ ಬಾಹಿರ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರಿಫ್, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಕಾರ್ಯದರ್ಶಿ ಕಲೀಲ್ ಉಲ್ಲಾ, ಖಜಾಂಚಿ ನಯಾಜ್ ಉಲ್ಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next