Advertisement

Mysuru ಚಲೋ ಚಾಮುಂಡಿ ಬೆಟ್ಟ : ಐದು ಸಾವಿರ ಮಂದಿ ಸೇರುವ ನಿರೀಕ್ಷೆ: ಸಂಸದ ಪ್ರತಾಪ್‌ ಸಿಂಹ

10:43 PM Oct 09, 2023 | Team Udayavani |

ಮೈಸೂರು: ಮಹಿಷ ದಸರಾ ಆಚರಣೆ ನೆಪದಲ್ಲಿ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಅವಮಾನಿಸುವ ಕೆಲಸವಾಗುತ್ತಿದೆ. ಇದನ್ನು  ತಡೆಯಲು ಅ.13ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಹಮ್ಮಿಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಮೈಸೂರಿನ ಕೆಲವರು ಮಹಿಷ ದಸರಾ ಆಚರಿಸುವ ಮೂಲಕ ನಾಡಿನ ಅಸ್ಮಿತೆ ತಾಯಿ ಚಾಮುಂಡೇಶ್ವರಿಯನ್ನು ದೆವ್ವವಾಗಿ ಬಿಂಬಿಸುವ ಕೆಲಸ ಮಾಡಿದರು. ನಮ್ಮ ಸರಕಾರದ ಅವಧಿಯಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈಗ ಮತ್ತೆ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ನಡೆಸಲು ಮುಂದಾಗಿದ್ದಾರೆ. ಇದನ್ನು ಬುಡಸಮೇತ ಕಿತ್ತುಹಾಕಬೇಕಿದ್ದು, ಅದಕ್ಕಾಗಿ  5 ಸಾವಿರಕ್ಕೂ ಹೆಚ್ಚು ಮಂದಿ ಬೆಟ್ಟಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸುತ್ತಿದ್ದೇವೆ. ದೇವಿ ದರ್ಶನದ ಬಳಿಕ ಯಾವುದೇ ಅಪದ್ಧ ನಡೆಯದಂತೆ ಮಹಿಷನ ಪ್ರತಿಮೆ ಬಳಿ ಪಹರೆ ನಿಲ್ಲುತ್ತೇವೆ. ಅಗತ್ಯ ಬಿದ್ದರೆ ಸಂಘರ್ಷಕ್ಕೂ ಸಿದ್ದ ಎಂದರು.

ಮಹಿಷ ದಸರಾವನ್ನು ಒಂದು ವರ್ಗ ಮಾಡಿಕೊಂಡು ಬಂದಿದೆ. ಜತೆಗೆ ಮಹಿಷ ದಸರಾ ಆಚರಣೆಯ ಕುರಿತು ವಿವರಣೆ ನೀಡುತ್ತಿದ್ದಾರೆ. ಹೀಗಿದ್ದರೂ ಅದನ್ನು ತಡೆಯುವ ಯತ್ನವೇಕೆ? ಅದು ಕೂಡ ಚಾಮುಂಡಿ ಚಲೋ ಹೆಸರಿನಲ್ಲಿ ತಡೆಯಲು ಯತ್ನಿಸುತ್ತಿರುವುದು ಸರಿಯಲ ಮಹಿಷ ದಸರೆ ಕುರಿತು ನ್ಯಾಯಾಲಯ ಏನು ಹೇಳಲಿದೆ ಎಂಬುದನ್ನು ಕಾದು ನೋಡಣ.
-ಎಚ್‌.ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next