Advertisement

ಔಷಧ ಮತ್ತು ಮಾರಾಟ ನೌಕರರಿಂದ ಚಲೋ ಬೆಂಗಳೂರು

11:59 AM Jun 10, 2018 | |

ಬೆಂಗಳೂರು: ಅಗತ್ಯ ವಸ್ತುಗಳಲ್ಲಿ ಒಂದಾದ ಔಷಧವನ್ನು ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಹೊರಗಿಡುವುದು, ಔಷಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಔಷಧ ಮತ್ತು ಮಾರಾಟ ನೌಕರರ ಸಂಘ ಜೂ.11ರಂದು “ಚಲೋ ಬೆಂಗಳೂರು’ ಕಾರ್ಯಕ್ರಮ ಹಮ್ಮಿಕೊಂಡಿದೆ.

Advertisement

 ಈ ಸಂಬಂಧ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಕುಮಾರ್‌, ಔಷಧೀಯ ಕಂಪೆನಿಗಳ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸೋಮವಾರ ನಗರದ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಬೃಹತ್‌ ಮೆರವಣಿಗೆ ನಡೆಸಲಿದ್ದು, ಸಂಜೆವರೆಗೂ ಧರಣಿ ನಡೆಸಲಿದ್ದಾರೆ ಎಂದರು.

ಔಷಧ‌ ಮತ್ತು ವೈದ್ಯಕೀಯ ಸಲಕರಣೆಗಳ ಬೆಲೆಗಳು ಗಗನಕ್ಕೇರುತ್ತಿದ್ದು, ದೇಶದ ಸಾಮಾನ್ಯ ಜನರು ತೀವ್ರ ತೊಂದರೆಗೀಡಾಗಿದ್ದಾರೆ. ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿ ನೀತಿಗಳನ್ನು ರೂಪಿಸುತ್ತಿದ್ದು, ದೊಡ್ಡ ಕಂಪನಿಗಳು ಅದನ್ನು ದುರುಪಯೋಗ ಮಾಡಿಕೊಂಡು ಅಧಿಕ ಲಾಭ ಪಡೆಯುತ್ತಿವೆ. ಈ ವಿಚಾರ ಸೇರಿ ಮಹಿಳಾ ಕಾರ್ಮಿಕರಿಗೆ ಆರು ತಿಂಗಳ ಪ್ರಸೂತಿ ನೀಡುವುದು ಮುಂತಾದ ನೌಕಕರ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next