Advertisement

ನನ್ನ ವಿರುದ್ದ ಮೊದಲು ಗೆಲ್ಲಲಿ: ರಾಮುಲುಗೆ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಸವಾಲು

12:51 PM Nov 21, 2019 | keerthan |

ಚಿತ್ರದುರ್ಗ: ಸಿದ್ದರಾಮಯ್ಯ ವಿರುದ್ಧ ಗೆಲ್ಲುವು ಎದುರು ಬೇಡ, ಮೊದಲು ನನ್ನ ವಿರುದ್ಧ ನಿಂತು ಗೆಲ್ಲಲಿ ಎಂದು ಆರೋಗ್ಯ ಸಚಿವ ಶ್ರೀರಾಮುಲುಗೆ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ನೇರ ಸವಾಲು ಹಾಕಿದ್ದಾರೆ.

Advertisement

ಉಪಚುನಾಣೆ ಪ್ರಚಾರದಲ್ಲಿ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಸುಳ್ಳು ಹೇಳಿಕೊಂಡು ಗೆಲ್ಲುವುದಲ್ಲ. ಈಗ ರಾಜಿನಾಮೆ ನೀಡಿ‌ ನನ್ನ ವಿರುದ್ಧ ಗೆಲ್ಲು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ‌ ಸವಾಲು ಹಾಕಿದರು.

ಸಿದ್ದರಾಮಯ್ಯ ರಾಜ್ಯದ ಮೇರು ಪರ್ವತ. ಮೊಳಕಾಲ್ಮೂರು ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡುವುದಾಗಿ ದೇವರ ಮೇಲೆ ಆಣೆ ಮಾಡಿದ್ದರು.‌ ಕೊನೆಗೆ ತಾನೇ ಬಂದು ನಿಂತರು. ಸೌಜನ್ಯಕ್ಕೂ ಮಾತಾಡಿಸಲಿಲ್ಲ ಎಂದು ದೂರಿದರು.

ಕಳೆದ ಚುನಾವಣೆಯಲ್ಲಿ ಸಿಎಂ ಆಗ್ತಿನಿ, ಡಿಸಿಎಂ ಆಗ್ತಿನಿ ಅಂತಾ ಮೊಳಕಾಲ್ಮೂರು ಜನರಿಗೆ ಸುಳ್ಳು ಹೇಳಿ ಗೆದ್ದರು. ಯಡಿಯೂರಪ್ಪ ಸಿಎಂ ಆಗಲ್ಲ, ನಾನೇ ಆಗ್ತಿನಿ ಎಂದು ಹೇಳಿದ್ದರು ಎಂದು ತಿಪ್ಪೇಸ್ವಾಮಿ ಆರೋಪಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ನಾಯಕ ಜನಾಂಗಕ್ಕೆ ಶೇ. 7.5 ಮೀಸಲಾತಿ ಕೊಡಿಸುತ್ತೇನೆ. ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದಿದ್ದರು. ನಾಲ್ಕು ತಿಂಗಳಾಯಿತು ಎಲ್ಲಿ ಹೋಯ್ತಪ್ಪ ನಿನ್ನ ರಕ್ತ ಎಂದು ಪ್ರಶ್ನಿಸಿದರು.

Advertisement

ಶ್ರೀರಾಮುಲು‌ ನಾಯಕ ಸಮುದಾಯದವರಲ್ಲ. ಆಂಧ್ರದ ಬೋಯಾಸ್ ಸಮುದಾಯಕ್ಕೆ ಸೇರಿದವರು. ಶ್ರೀರಾಮುಲು ಎಲ್ಲಿ ಹೋದರೂ ಸುಳ್ಳು ಹೇಳುತ್ತಾರೆ. ಅವರಿಗೆ ನಾಚಿಕೆ ಆಗಬೇಕು.

ಮೊಳಕಾಲ್ಮೂರು ಶಾಸಕರಾಗಿ ಎರಡು ವರ್ಷ ಆಯ್ತು ಏನೂ ಅಭಿವೃದ್ಧಿ ಆಗಿಲ್ಲ. ತುಂಗಭದ್ರಾ ಹಿನ್ನೀರು ತಂದಿದ್ದು‌ ನಾನು. ವಾಲ್ಮೀಕಿ ಸಮುದಾಯ ಭವನ, ಐಟಿಐ‌ ಕಾಲೇಜು, ಮಿನಿ ವಿಧಾನ ಸೌಧ ತಂದಿದ್ದು ನಾನು. ಬೇಕಾದರೆ ಆರ್ಟಿಐ ನಲ್ಲಿ ತೆಗೆದು ನೋಡಿ ಎಂದರು.

ರಾಜಿನಾಮೆ ಕೊಟ್ಟು ಮೊಳಕಾಲ್ಮೂರು ಕ್ಷೇತ್ರದಲ್ಲಿ ನನ್ನ ಎದುರು ಮೊದಲು ಗೆಲ್ಲು. ಬಿ. ಶ್ರೀರಾಮುಲು ಅಂದ್ರೆ ಬುಲ್ಡೆ ರಾಮುಲು, ಬೋಗಸ್ ರಾಮುಲು ಅಂತಾ ಅರ್ಥ.

ಪರ್ಸೆಂಟೇಜ್ ರಾಮುಲು: 7 ರಿಂದ 10 ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದಾರೆ. ರಾಮುಲು ಕಡೆಯವರು ಲೆಟರ್ ಹೆಡ್ ಗೆ ಎಂಟು ಹತ್ತು ಸಾವಿರ ತಗೋತಾರೆ. ರಾಮುಲು ಏನು ಆಡಳಿತವಪ್ಪ ನಿನ್ನದು ಎಂದು ಆರೋಪಿಸಿದರು.

ಶ್ರೀರಾಮುಲು ಹಣೆ ಬರಹಕ್ಕೆ ಅಳಿಯ, ತಂಗಿ, ಅಣ್ಣನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಬಳ್ಳಾರಿಯಲ್ಲಿ ಗೆಲ್ಲಲು ಆಗಲ್ಲ ಅಂತಾ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದಿದ್ದಾರೆ.

ಮೊಳಕಾಲ್ಮೂರು ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ನರ್ಸ್ ಇಲ. ನಿನ್ನ ಇಲಾಖೆಯ ಕೆಲಸವನ್ನೇ‌ ನೀನು ಮಾಡಿಕೊಡಲು ಆಗಿಲ್ಲ. ನೀನು ಲೀಡರ್ ಅಲ್ಲ. ಮರಳು ದಂಧೆಯಲ್ಲಿ ಶಾಮೀಲಾಗಿದ್ದಾರೆ. ಸಂಪತ್ತನ್ನು ಹೊಡೆಯಲು ಬಂದಿದಿರಿ. ಅಭಿವೃದ್ಧಿ ಮಾಡಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಕಲಿಯಪ್ಪ ರಾಮುಲು: ವೇಷ ಹಾಕಿಕೊಂಡು ಬಣ್ಣ ಬಳಿದುಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಕನ್ನಡವೇ ಬರುವುದಿಲ್ಲ. ಬಿಜೆಪಿಯವರು ಅವರಿಗೆ ಕನ್ನಡ ಕಲಿಯಲು ಹೇಳಿ. ಆಸ್ಪತ್ರೆಯಲ್ಲಿ ಕೆಳಗೆ ಕುಳಿತು ಡ್ರಾಮಾ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಣ್ಣ, ಚನ್ನಪ್ಪ ನೇರಲಗುಂಟೆ, ಚಿಕ್ಕೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next