Advertisement

ದಾಖಲೆ ಸಮೇತ ಚರ್ಚೆಗೆ ಬರಲು ಸಚಿವರಿಗೆ ಪಂಥಾಹ್ವಾನ

06:05 PM Jun 23, 2022 | Team Udayavani |

ದೇವನಹಳ್ಳಿ: ಚನ್ನರಾಯಪಟ್ಟಣದ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಕೆಐಎಡಿಬಿ ವತಿಯಿಂದ ಭೂಸ್ವಾಧೀನಕ್ಕೆ ಮುಂದಾಗಿದ್ದು, ಇದಕ್ಕೆ ಒಪ್ಪಿಗೆ ನೀಡಿರುವ ರೈತರ ಮಾಹಿತಿಯನ್ನು ಕೈಗಾರಿಕಾ ಸಚಿವ ನಿರಾಣಿ ಮುಂದಾಗಲಿ ಎಂದು ರೈತರು ಬಹಿರಂಗವಾಗಿ ಪಂಥಾಹ್ವಾನ ನೀಡಿದರು.

Advertisement

ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರು, “ಶೇ. 75ರಷ್ಟು ರೈತರು ಭೂಮಿ ನೀಡಲು ತಯಾರಾಗಿಲ್ಲ, ಅವರ ಸಂಪೂರ್ಣ ಮಾಹಿತಿ ನಮ್ಮಲ್ಲಿದೆ ಎಂದು ತಿಳಿಸಿದರು.

ಒಪ್ಪಿಕೊಂಡಿಲ್ಲ:ಬೆಂಗಳೂರಿಗೆ ದಲ್ಲಾಳಿಗಳು ಕರೆದೊಯ್ಯುವ ರೈತರನ್ನು ನೋಡಿ, ಎಲ್ಲರೂ ಭೂಮಿ ನೀಡಲು ಸಿದ್ಧರಿದ್ದಾರೆ ಎಂದು ಸಚಿವರು ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ. ದಾಖಲೆ ಸಮೇತ ಅದಕ್ಕೆ ಉತ್ತರ ನೀಡಲಿ. ದಲಿತರ ಜಮೀನು ಕಬಳಿಸಲು ಒಂದಿಷ್ಟು ಹಣ ನೀಡಿ, ಜಾತ್ರೆಗಳನ್ನು ಮಾಡಿಸಿದ ಮಾತ್ರಕ್ಕೆ ಭೂಮಿ ನೀಡಲು ಅನ್ನದಾತರು ಒಪ್ಪಿಕೊಂಡಂತಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

79 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರನ್ನು ಮಾತನಾಡಿಸಲು ಸೌಜನ್ಯವಿಲ್ಲದ ಸಚಿವರು, ಬ್ರೋಕರ್‌ಗಳು ಕರೆತಂದ ರೈತರನ್ನು ಮಾತನಾಡಿದರು. ಕೇವಲ 5 ನಿಮಿಷಗಳಲ್ಲಿ ಪ್ರತ್ಯಕ್ಷರಾಗುತ್ತಾರೆ. ಸಮಸ್ಯೆ ಇರುವ ರೈತರೊಂದಿಗೆ ಮಾತನಾಡುವೇ ಎನ್ನುವ ಅವರು, ಅದನ್ನು ಕಾರ್ಯರೂಪಕ್ಕೆ ತರಲು ಚನ್ನರಾಯಪಟ್ಟಣಕ್ಕೆ ಬರಲಿ ಎಂದು ಒತ್ತಾಯಿಸಿದರು.

ರೈತರು ಜಮೀನು ನೀಡಲು ಸಿದ್ಧರಿಲ್ಲ: ವರದಿಯಾದಂತೆ ಪ್ರಕಾಶ್‌ ಎಂಬುವರ ನೇತೃತ್ವದಲ್ಲಿ ರೈತರು ಸಚಿವರನ್ನು ಭೇಟಿ ಮಾಡಿ ಭೂಮಿ ನೀಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿದೆ. “ಪ್ರಕಾಶ್‌ ಎಂಬುವ ರೈತನೇ ಅಲ್ಲ, ಆತನೊಬ್ಬ ದಲ್ಲಾಳಿ, ದುಡ್ಡು ಮಾಡುವ ಪ್ರವೃತ್ತಿಯಿಂದ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

Advertisement

ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಿ: ನಿಜವಾದ ರೈತರನ್ನು ಗುರುತಿಸುವಲ್ಲಿ ಸರ್ಕಾರ ಪದೇ ಪದೆ ಎಡವುತ್ತಿದೆ. ಒಂದು ಎಕರೆ ಭೂಮಿಗೆ 10 ಕೋಟಿ ನೀಡಿದರೂ, ಸಹ ಕೃಷಿ ಜಮೀನು ನೀಡಲು ಭೂಸ್ವಾಧೀನ ವಿರೋಧಿ ಹೋರಾಟದ ಬೆಂಬಲಕ್ಕೆ ನಿಂತಿರುವ ರೈತರು ಸಿದ್ಧವಿಲ್ಲ ಎಂಬುದನ್ನು ಸಚಿವರು ಅರ್ಥಮಾಡಿಕೊಂಡು, ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು, ದೇವನಹಳ್ಳಿ ಬಂದ್‌ಗೆ ಬೆಂಬಲ ನೀಡಿದ್ದ 40ಕ್ಕೂ ಅಧಿಕ
ಸಂಘಟನೆಗಳು ಹಾಗೂ ಕೋಲಾರ್‌, ಶಿವಮೊಗ್ಗ, ಬಳ್ಳಾರಿಯ ರೈತರಿಗೆ ಕೃತಜ್ಞತೆ ತಿಳಿಸಿದರು. ಮುಖಂಡ ಮಾರೇಗೌಡ, ಪ್ರಮೋದ್‌, ವೆಂಕಟರಮಣ್ಣಪ್ಪ, ದೇವರಾಜ, ನಲ್ಲಪ್ಪನಹಳ್ಳಿ ನಂಜಪ್ಪ, ರಮೇಶ್‌, ರಾಮಾಂಜಿನಪ್ಪ, ಲಕ್ಷ್ಮಮ್ಮ ಹಾಗೂ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next