Advertisement

ಛಲವಾದಿ ಸಮಾಜದವರು ಒಡೆದಾಳುವ ನೀತಿ ಅನುಸರಿಸಿದವರಲ್ಲ

12:30 AM Feb 25, 2019 | |

ದಾವಣಗೆರೆ: “ಅವಕಾಶ ಸಿಕ್ಕಾಗಲೆಲ್ಲಾ ಛಲವಾದಿ ಸಮಾಜದವರು ತುಳಿತಕ್ಕೆ ಒಳಗಾಗಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಛಲವಾದಿ ಮಹಾಸಭಾ ಶ್ರೀಶಿವಯೋಗಿ ಮಂದಿರದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಮತ್ತು ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

“ತುಳಿತಕ್ಕೊಳಗಾಗಿರುವುದನ್ನು ತಿಳಿಸಬೇಕಲ್ಲದೆ, ಆ ತುಳಿತಕ್ಕೆ ಎದುರಾಗಿನಿಲ್ಲಬೇಕೆಂಬ ಉದ್ದೇಶದಿಂದಲೇ ಈ ಸಮಾವೇಶಕ್ಕೆ ಬಂದಿದ್ದೇನೆ. ನಿಮ್ಮ ಸಂಘಟನೆಯೇ ನನಗೆ ಶಕ್ತಿ ತುಂಬಬೇಕಿದೆ’ ಎಂದರು. ಛಲವಾದಿ ಸಮಾಜದವರು ಸದಾ ತುಳಿತಕ್ಕೆ, ಶೋಷಣೆಗೊಳಗಾಗಿದ್ದಾರೆ. ಆದರೆ, ನಾವು ಎಂದೂ ವರ್ಗೀಕರಣ ಮಾಡಿದವರಲ್ಲ. ನಾನು ಮತ್ತು ಮಲ್ಲಿಕಾರ್ಜುನ ಖರ್ಗೆ ಒಡೆದಾಳುವ ನೀತಿ ಅನುಸರಿಸಿದವರಲ್ಲ. ಈ ಹಿಂದೆ ಮಹಾಸಭಾ ರಚಿಸುವ ಬಗ್ಗೆ ಪ್ರಸ್ತಾಪಿಸಿದಾಗ ನಾವಿಬ್ಬರೂ ಬೆಂಬಲ ನೀಡಲಿಲ್ಲ. ಏಕೆಂದರೆ ನಾವು ಬಾಬಾಸಾಹೇಬ್‌ ಅಂಬೇಡ್ಕರ್‌ ಅನುಯಾಯಿಗಳು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ಅನಿವಾರ್ಯತೆ ಎದುರಾಗಿದೆ. ತುಳಿತದ ವಿರುದ್ಧ  ಹೋರಾಟ ನಡೆಸಲೇ ಬೇಕಿದೆ. ಸಮುದಾಯದಲ್ಲಿ ಹೋರಾಟದ ಕಿಚ್ಚು ಬರಬೇಕಿದೆ. ಆ ಹೋರಾಟದ ನೇತೃತ್ವವನ್ನು ಯುವ ಮುಖಂಡ ಪ್ರಿಯಾಂಕ್‌ ಖರ್ಗೆ ಹೊರಬೇಕಿದೆ. ಸಂಘಟನೆ ಮೂಲಕ ಸಮುದಾಯ ಬಲಿಷ್ಠ ಪಡಿಸಬೇಕಿದೆ ಎಂದು ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next