Advertisement

ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುವುದು ಸಿದ್ದರಾಮಯ್ಯ ಚಟ: ಛಲವಾದಿ ನಾರಾಯಣಸ್ವಾಮಿ

08:30 PM May 23, 2022 | Team Udayavani |

ಬೆಂಗಳೂರು: ದಲಿತರು, ಹಿಂದುಳಿದವರು ಅಥವಾ ಹಿಂದುಗಳು, ಮುಸಲ್ಮಾನರು ಮತ್ತು ಕ್ರೈಸ್ತರು- ಹೀಗೆ ಎಲ್ಲರೂ ಗೋಮಾಂಸವನ್ನು ತಿನ್ನುತ್ತಾರೆ. ಆದ್ದರಿಂದ ಗೋಮಾಂಸ ನಿಷೇಧಿಸಬಾರದು ಎಂದು ವಿರೋಧ ಪಕ್ಷದ ನಾಯಕರು ಮತ್ತು ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯರವರು ನಿನ್ನೆ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಸಿದ್ದರಾಮಯ್ಯರಿಗೆ ಗೋಮಾಂಸ ತಿನ್ನಬೇಕಿನಿಸದರೆ ತಿನ್ನಲಿ. ಆದರೆ, ವಕಾಲತ್ತು ವಹಿಸುವುದನ್ನು ಅವರು ಬಿಡಬೇಕು ಎಂದು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಕಾರ ಒಂದು ತೀರ್ಮಾನ ತೆಗೆದುಕೊಂಡಿದೆ. ಅಂಥ ತೀರ್ಮಾನಕ್ಕೆ ಸಹಕರಿಸುವುದು ವಿರೋಧ ಪಕ್ಷಗಳ ನೀತಿಯಾಗಬೇಕು. ಇದರಲ್ಲಿ ಸುಮ್ಮನೆ ಜನರನ್ನು ಎತ್ತಿಕಟ್ಟುವುದು ಸರಿಯಲ್ಲ ಎಂದರು.

ಇದನ್ನೂ ಓದಿ:ಮತ್ತೆ ಶುರುವಾದ ಮಂಡ್ಯ-ಮೈಸೂರು ಸಂಸದರ ವಾಕ್ಸಮರ

ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗುವಾಗಲೂ ಮಾಂಸದೂಟ ಉಂಡೇ ಹೋಗಿದ್ದರು. ಬಳಿಕ ಅದನ್ನು ಸಮರ್ಥಿಸಿಕೊಂಡಿದ್ದರು. ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುವುದು ಸಿದ್ದರಾಮಯ್ಯರಿಗೆ ಒಂದು ಚಟ ಎಂದು ಟೀಕಿಸಿದರು.

Advertisement

ದಲಿತರು, ಹಿಂದುಳಿದವರನ್ನು ಎತ್ತಿ ಕಟ್ಟುವುದು ಅವರಿಗೆ ಒಂದು ಚಟವಾಗಿದೆ. ಇಂಥಹ ಚಟದಿಂದ ದೂರವಾಗಿ ಎಂದು ಒತ್ತಾಯಿಸಿದರು. ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ಮಾಡಬಾರದು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next