Advertisement

ಸಿದ್ಧರಾಮಯ್ಯ ಮೇಲ್ನೋಟಕ್ಕೆ ಬಸಪ್ಪ, ಒಳಗೆ ವಿಷಪ್ಪ: ಛಲವಾದಿ ನಾರಾಯಣಸ್ವಾಮಿ

04:47 PM Mar 31, 2023 | Team Udayavani |

ಮೈಸೂರು : ಸಿದ್ಧರಾಮಯ್ಯ ಮೇಲ್ನೋಟಕ್ಕೆ ಮಾತ್ರ ಬಸಪ್ಪ, ಒಳಗೆ ವಿಷಪ್ಪ ಎಂದು ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ, ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದಲಿತ ಸಮುದಾಯದ ಪ್ರಭಾವಿ ನಾಯಕರನ್ನು ಸಿದ್ಧರಾಮಯ್ಯ ವ್ಯವಸ್ಥಿತವಾಗಿ ತುಳಿದರು.ಡಾ ಜಿ ಪರಮೇಶ್ವರ್ ಸೋಲಿಗೆ ಸಿದ್ಧರಾಮಯ್ಯ ಕಾರಣರಾದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಆರ್ ಧ್ರುವನಾರಾಯಣ್ ಸೋಲಿಗೆ ಸಿದ್ಧರಾಮಯ್ಯ ಕಾರಣರು.ಧ್ರುವನಾರಾಯಣ್ ನನಗೆ ಆತ್ಮೀಯರಾಗಿದ್ಧರು.ಪ್ರತಿ ಹದಿನೈದು ದಿನಕ್ಕೊಮ್ಮೆ ಮಾತನಾಡುತ್ತಿದ್ಧರು. ಮಾತನಾಡಿದಾಗಲೆಲ್ಲಾ ಸಿದ್ಧರಾಮಯ್ಯ ನಮ್ಮನ್ನು ಬೆಳೆಯಲು ಬಿಡೋದಿಲ್ಲ ಎಂದು ಹೇಳಿಕೊಳ್ಳುತ್ತಿದ್ಧರು.
ಅವರ ಸಾವಿಗೂ ಇವರೇ ಕಾರಣರು. ಮಾಜಿ ಸಚಿವ ಮಹದೇವಪ್ಪ ಜೊತೆ ಸೇರಿಕೊಂಡು ಧ್ರುವನಾರಾಯಣ್ ಮುಗಿಸಿದರು ಎಂದು ಗಂಭೀರ ಆರೋಪ ಮಾಡಿದರು.

ಇದೀಗ ಮಹದೇವಪ್ಪ ನಂಜನಗೂಡು ಟಿಕೆಟನ್ನು ಧ್ರುವನಾರಾಯಣ್ ಮಗನಿಗೆ ಬಿಟ್ಟು ಕೊಡುತ್ತೇನೆ ಎಂದಿದ್ದಾರೆ.ಅದರ ಅರ್ಥ ಅವರಾಗಲೇ ನಂಜನಗೂಡನ್ನು ಕಬ್ಜಾ ಮಾಡಿಕೊಂಡಿದ್ಧರು.ಮಗನನ್ನು ಟಿ ನರಸೀಪುರದಲ್ಲಿ ನಿಲ್ಲಿಸಿ ನಂಜನಗೂಡಿನಲ್ಲಿ ನಿಲ್ಲಲು ಸಿದ್ಧತೆ ನಡೆಸಿದ್ಧರು.
ಸಿದ್ಧರಾಮಯ್ಯ ದಲಿತ ನಾಯಕರ ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ಕೂಡ ಮುಗಿಸಿದರು ಎಂದು ಕಿಡಿ ಕಾರಿದರು.

ಒಳ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಜೆಡಿಎಸ್ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದರು. ಅವರು ಮಾಡದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿ ತೋರಿಸಿದೆ. ಕೊರಚ, ಕೊರಮ, ಬಂಜಾರ, ಬೋವಿ ಸಮಾಜಗಳನ್ನು ಇಡೀ ದೇಶದಲ್ಲಿ ಎಲ್ಲಿಯೂ ಎಸ್ ಸಿ ಗೆ ಸೇರಿಸಿಲ್ಲ.ನಮ್ಮ ರಾಜ್ಯದಲ್ಲಿ ಮಾತ್ರೆ ಎಸ್ ಸಿ ಕೆಟಗರಿಗೆ ಸೇರಿಸಲಾಗಿದೆ. ಈ ಸಮುದಾಯಳಿಗೆ 3% ಇದ್ದ ಮೀಸಲಾತಿಯನ್ನು 4.5% ಕ್ಕೆ ಹೆಚ್ಚಳ ಮಾಡಿದ್ದೇವೆ. ಆದರೆ ಕಾಂಗ್ರೆಸ್ ನಾಯಕರು ಚಿತಾವಣೆ ಮಾಡಿ ಈ ಸಮುದಾಯಗಳ ಮೀಸಲಾತಿ ಕಡಿತ ಮಾಡಲಾಗಿದೆ ಎಂದು ತಪ್ಪು ಸಂದೇಶ ರವಾನೆ ಮಾಡಿದ್ದಾರೆ. ಹಾಗಾಗಿ ವಾಸ್ತವ ಪರಿಸ್ಥಿತಿ ಅರಿಯದ ಆ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ಧಾರೆ.ಆ ಬಳಿಕ ಜನರಿಗೆ ನೈಜ ಸ್ಥಿತಿ ಗೊತ್ತಾಗಿದೆ ಎಂದರು.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಎಲ್ಲರೂ ನೀಡಿರುವ ಅಭಿಪ್ರಾಯವನ್ನು ರಾಜ್ಯ ಬಿಜೆಪಿ ಹೈಕಮಾಂಡ್ ಗೆ ಸಲ್ಲಿಸಲಿದೆ ಎಂದರು.

Advertisement

ಚುನಾವಣೆ ಘೋಷಣೆಯಾದ ಬಳಿಕ ಯಾರು ಕೂಡ ನಿರಾಧಾರ ಆರೋಪ ಮಾಡುವಂತಿಲ್ಲ. ಆದರೆ ಕಾಂಗ್ರೆಸ್ ನಾಯಕರು ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಬಿಜೆಪಿ ವಿರುದ್ಧ 40% ಸರ್ಕಾರ ಎಂದು ಆರೋಪ ಮಾಡಿದರು‌. ಹಾಗಾಗಿ ಕಾಂಗ್ರೆಸ್ ನಾಯಕರ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದರು.

ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯಿತು.ಅದೇ ಕಾರಣಕ್ಕೆ ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ತಂದರು. ಲೋಕಾಯುಕ್ತ ಇದ್ದಿದ್ದರೇ ಭ್ರಷ್ಟಾಚಾರದ ತನಿಖೆ ನಡೆದು ಒಂದು ಡಜನ್ ನಾಯಕರು ಜೈಲಿಗೆ ಹೋಗುತ್ತಿದ್ಧರು. ಅದರಿಂದ ಬಚಾವಾಗಲು ಲೋಕಾಯುಕ್ತ ಬಂದ್ ಮಾಡಿದರು ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next