ಬೆಂಗಳೂರು: ದಲಿತರು, ಹಿಂದುಳಿದವರು, ಹಿಂದೂಗಳು, ಕ್ರೈಸ್ತರೂ ಗೋಮಾಂಸ ತಿನ್ನುತ್ತಾರೆ. ಹಾಗಾಗಿ ಗೋ ಮಾಂಸ ನಿಷೇಧ ಮಾಡಬಾರದೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೇಕಾದರೆ ಅವರು ಗೋಮಾಂಸ ತಿನ್ನಲಿ. ಆದರೆ ವಕೀಲಿಕೆ ಮಾಡುವುದು ಬೇಡ ಎಂದು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಿರ್ಧಾರ ತೆಗೆದುಕೊಂಡಾಗ ಅದಕ್ಕೆ ಬೆಂಬಲ ನೀಡಬೇಕು. ಆದರೆ ಅದನ್ನು ವಿರೋಧಿಸುವುದು ಬೇಡ ಎಂದರು.
ಇದನ್ನೂ ಓದಿ:ಕೊರಟಗೆರೆ: ತಾಲೂಕು ವಕ್ಕಲಿಗರ ಜಾಗೃತಿ ಸಂಘದ ನೂತನ ಅಧ್ಯಕ್ಷರಾಗಿ ವಿ.ಕೆ.ವೀರಕ್ಯಾತರಾಯ ಆಯ್ಕೆ
ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗುವಾಗ ಮಾಂಸ ತಿಂದು ಹೋಗಿದ್ದರು. ಅದನ್ನೂ ಸಮರ್ಥನೆ ಮಾಡಿಕೊಂಡಿದ್ದರು. ಅವರಿಗೆ ಬಿಜೆಪಿ, ಆರ್ ಎಸ್ಎಸ್ ಬಗ್ಗೆ ಮಾತನಾಡುವ ಚಟ. ಅವರು ಬೇರೆ ಬೇರೆ ಸಂದರ್ಭದಲ್ಲಿ ಮಾತನಾಡುವಾಗ ದಲಿತರನ್ನು, ಹಿಂದುಳಿದವರನ್ನು ಎತ್ತಿ ಕಟ್ಟುತ್ತಾರೆ. ದೇಶ ದೊಡ್ಡದು, ದೇಶ ಕಟ್ಟುವ ಕೆಲಸ ಮಾಡಬೇಕೇ ಹೊರತು ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.