Advertisement
ವೆಂಕಟರಮಣ ನ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಸಹಯೋಗದಲ್ಲಿ ಉದ್ಯಾವರ ಗ್ರಾ.ಪಂ. ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಂದಿಯ ಸಮ್ಮುಖದಲ್ಲಿ ತನುಶ್ರೀ ಅವರಿಂದ ಈ ಸಾಧನೆ ದಾಖಲಾಯಿತು.
Related Articles
ತನುಶ್ರೀ ಈ ಹಿಂದೆ 4 ವಿಶ್ವದಾಖಲೆ ನಿರ್ಮಿಸಿದ್ದಾರೆ. 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡಿದರೆ, 2018ರಲ್ಲಿ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿರಿಸಿ ಉಳಿದ ಭಾಗವನ್ನು 1.42 ನಿಮಿಷದಲ್ಲಿ 42 ಬಾರಿ ತಿರುಗಿಸಿ ದಾಖಲೆ ಮಾಡಿದ್ದರು. 2019ರಲ್ಲಿ ಇದೇ ಭಂಗಿಯಲ್ಲಿ ತನ್ನ ಹಿಂದಿನ ದಾಖಲೆ ಮುರಿದು ಹೊಸದಾಖಲೆ ನಿರ್ಮಿಸಿದ್ದರೆ 2019ರಲ್ಲಿ ಧನುರಾಸನ ಭಂಗಿಯನ್ನು 1.40 ನಿಮಿಷದಲ್ಲಿ 96 ಬಾರಿ ಮಾಡಿ ದಾಖಲೆ ನಿರ್ಮಿಸಿದ್ದರು.
Advertisement
ಚಕ್ರಾಸನ ಮಾಡು ವುದೇ ಕಷ್ಟ, ಮಾಡಿದರೂ ಅಬ್ಬಬ್ಟಾ ಎಂದರೆ 10 ಮೀಟರ್ ಕ್ರಮಿಸಬಹುದು. ಆದರೆ ತನುಶ್ರೀ ಕೇವಲ 1.14 ನಿಮಿಷದಲ್ಲಿ 100 ಮೀಟರ್ ಕ್ರಮಿಸಿ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.– ಡಾ| ಮನೀಷ್ ವಿಷ್ಣೋಯಿ, ಮುಖ್ಯಸ್ಥ (ತೀರ್ಪುಗಾರ), ಏಶ್ಯಾವಿಭಾಗ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್.