ಮುಂಬೈ : 3 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಅನುಷ್ಕಾ ಶರ್ಮಾರ “ಚಕದಾ ಎಕ್ಸ್‌ಪ್ರೆಸ್’ ಸಿನಿಮಾದ ಟೀಸರ್ ಗುರುವಾರ ಬಿಡುಗಡೆಯಾಗಿದೆ. ನೆಟ್ಟಿಗರು ಈ ಟೀಸರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ಜುಲಾನ್ ಗೋಸ್ವಾಮಿ ಅವರ ಜೀವನವನ್ನೇ ತೆರೆ ಮೇಲೆ ತರುತ್ತಿರುವ ಈ ಸಿನಿಮಾದಲ್ಲಿ ಅನುಷ್ಕಾ ಜುಲಾನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಜುಲಾನ್ ರೀತಿ ಬಂಗಾಳಿಯಲ್ಲಿ ಮಾತನಾಡುವುದರಲ್ಲಿ ಅನುಷ್ಕಾ ವಿಫಲವಾಗಿದ್ದಾರೆ, ಹಾಗೆಯೇ ಅವರ ಬಣ್ಣ ಹೋಲಿಕೆ ಮಾಡುವುದರಲ್ಲೂ ಸೋತಿದ್ದಾರೆ ಎಂದು ನೆಟ್ಟಿಗರು ದೂರಿದ್ದಾರೆ.
ಇದನ್ನೂ ಓದಿ : ಕಾಶ್ಮೀರ ಮಾಜಿ ಸಿಎಂಗಳಿಗೆ ನೀಡಲಾಗಿದ್ದ ವಿಶೇಷ ಭದ್ರತೆ ಹಿಂಪಡೆಯಲು ಕೇಂದ್ರ ಚಿಂತನೆ