Advertisement

ಚಿಕ್ಕಬಳ್ಳಾಪುರ: ಚಿನ್ನದ ಸರ ದೋಚಿದ ಕಳ್ಳರು ಜೈಲುಪಾಲು

07:05 PM Jul 30, 2022 | Team Udayavani |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಅಂಗಡಿ ಮುಂಭಾಗದಲ್ಲಿ ಕುಳಿತುಕೊಂಡಿದ್ದ ಮಹಿಳೆಯ ಕತ್ತಿನಿಂದ ಚಿನ್ನದ ಸರವನ್ನು ದೋಚಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ ಕುಖ್ಯಾತ ಕಳ್ಳರನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಬಂಧಿಸುವುದರಲ್ಲಿ ಯಶಸ್ವಿಯಾಗಿ, ಆರೋಪಿಗಳಿಂದ 5 ಲಕ್ಷ 50 ಸಾವಿರ ರೂ.ಗಳ ಮೌಲ್ಯದ 110 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

Advertisement

ತುಮಕೂರು ಜಿಲ್ಲೆಯ ನೆಲಮಂಗಲದ ಇಮ್ರಾನ್ ಪಾಷ ಅಲಿಯಾಸ್ ಬೋಡ್ಕೆ (27), ನೆಲಮಂಗದ ಸಿಕಂದರ್ ಖುರೇಷಿ ಅಲಿಯಾಸ್ ಸಿಕ್ಕು (24) ಹಾಗೂ ಬೆಂಗಳೂರಿನ ಜೆಜೆ ನಗರ (ಗೌರಿಪಾಳ್ಯ) ಶಬರೀಶ್ ಅಲಿಯಾಸ್ ಅಪ್ಪು ಅಪ್ಪಿ (26) ಬಂಧಿತ ಆರೋಪಿಗಳು.

ತಾಲೂಕಿನ ಅಣಕನೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಎಲ್ ನಾಗೇಶ್ ಮಾತನಾಡಿ ,ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಕಾಡಿಗಾನಹಳ್ಳಿ ಗ್ರಾಮದ ವೆಂಕಟಲಕ್ಷ್ಮಮ್ಮ ಎಂಬುವವರು 15.07.2022 ರಂದು ಬೆಳಗ್ಗೆ 9:30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ನಗರದ ತನ್ನ ಸಂಬಂಧಿ ಶ್ರೀನಿವಾಸ್ ಅವರ ಅಂಗಡಿಯ ಮುಂಬಾಗದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರು ತನ್ನ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ: ಮತ್ತೆ 16 ಮಂದಿ ಶಂಕಿತರು ಪೊಲೀಸ್ ವಶಕ್ಕೆ

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿ ಚಿಕ್ಕಬಳ್ಳಾಪುರ ನಗರ, ಚಿಂತಾಮಣಿ ನಗರ, ಶಿಡ್ಲಘಟ್ಟ ಗ್ರಾಮಾಂತರ, ದೊಡ್ಡಬೆಳವಂಗಲ ಹಾಗೂ ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನದ ಪ್ರಕರಣಗಳು ಖುಲಾಸೆಯಾಗಿದೆ. ಆರೋಪಿಗಳು 5 ಪ್ರಕರಣಗಳಲ್ಲಿ ಭಾಗಿಯಾಗಿದ್ದು ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಆರೋಪಿ ಇಮ್ರಾನ್ ಪಾಷ ಅಲಿಯಾಸ್ ಬೋಡ್ಕೆ ವಿರುದ್ದ ಈಗಾಗಲೇ 31 ಪ್ರಕರಣಗಳು, ಆರೋಪಿ ಶಬ್ರೀಶ್ ವಿರುದ್ದ 28 ಪ್ರಕರಣಗಳು ಹಾಗೂ ಸಿಕಂದರ್ ವಿರುದ್ದ 02 ಪ್ರಕರಣಗಳು ದಾಖಲಾಗಿರುತ್ತದೆ ಎಂದು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿಗಳು ಕೊಲೆ, ಸುಲಿಗೆ, ದರೋಡೆ, ಕೊಲೆ ಯತ್ನ, ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಚಿಕ್ಕಬಳ್ಳಾಪುರ ಡಿವೈಎಸ್‍ಪಿ ವಾಸುದೇವ್, ಸಿಪಿಐ ಟಿ.ರಾಜು, ಪಿಎಸ್‍ಐ ಪ್ರದೀಪ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next