ಬೆಂಗಳೂರು: ಕದ್ದ ಬೈಕ್ನಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯರ ಸರ ಕಸಿದುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ನಿವಾಸಿ ಸೈಯದ್ ಖಾಸೀಫ್(22), ಫರೀದ್ ಅಹ್ಮದ್ (20)ಮತ್ತು ಕಳವು ವಸ್ತುಗಳನ್ನು ಸ್ವೀಕರಿಸುತ್ತಿದ್ದ ಪಾದರಾಯನಪುರ ನಿವಾಸಿ ಸುಲ್ತಾನ್ ಪಾಷಾ (27) ಬಂಧಿತರು. ಆರೋಪಿಗಳಿಂದ 48.5ಗ್ರಾಂ ತೂಕದ ಚಿನ್ನದ ಸರ, ಕದ್ದ ಮೊಬೈಲ್, ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಸೈಯದ್ ಖಾಸೀಫ್ ಮತ್ತು ಫರೀದ್ ಅಹ್ಮದ್ ಇತ್ತೀಚೆಗೆ ಠಾಣಾ ವ್ಯಾಪ್ತಿಯ ಲಕ್ಷ್ಮೀ ರೋಡ್ ಜಂಕ್ಷನ್ ಬಳಿನಡೆದುಕೊಂಡು ಹೋಗುತ್ತಿದ್ದ ಹೇಮಲತಾ ಎಂಬುವರನ್ನು ಹಿಂಬಾಲಿಸಿ ಸರ ಕಸಿದುಕೊಂಡುಪರಾರಿಯಾಗಿದ್ದರು. ವಿಚಾರಣೆ ವೇಳೆಆರೋಪಿಗಳು ಬಿಟಿಎಂ ಲೇಔಟ್ನಲ್ಲಿ ಬೈಕ್ ಕಳ್ಳತನ ಮಾಡಿ, ಅದರ ಮೂಲಕ ನಗರದಲ್ಲಿಸುತ್ತಾಡಿ ಮಹಿಳೆಯರ ಸರ ಕಳವು ಮಾಡತ್ತಿದ್ದರು ಎಂದು ಪೊಲೀಸರು ಹೇಳಿದರು.