ತನ್ನ ಟೈಟಲ್ ಮತ್ತು ಟೀಸರ್ ಮೂಲಕವೇ ಗಾಂಧಿನಗರದಲ್ಲಿ ಒಂದಷ್ಟು ಸೌಂಡ್ ಮಾಡುತ್ತಿದ್ದ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’’ ಚಿತ್ರತೆರೆಗೆ ಬರೋದಕ್ಕೆ ಮುಹೂರ್ತ ನಿಗದಿಯಾಗಿದೆ.
ಇದೇ ಸೆ.17ರಂದು “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ‘ ಚಿತ್ರ ಬಿಡುಗಡೆಯಾಗುತ್ತಿದ್ದು, ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚಿನಕೇಂದ್ರಗಳಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ‘ ಚಿತ್ರದಲ್ಲಿ ಆಸ್ಕರ್‌ಕೃಷ್ಣ, ಲೋಕೇಂದ್ರ ಸೂರ್ಯ ನಾಯಕರಾಗಿ, ಗೌರಿ ನಾಯರ್ ನಾಯಕಿಯಾಗಿ ಮತ್ತು ಸೆವೆನ್ ರಾಜ್ ಖಳನಾಯಕನಾಗಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸೆವೆನ್ ರಾಜ್ ಆರ್ಟ್ಸ್’ ಬ್ಯಾನರ್ ನಲ್ಲಿ ಸೆವೆನ್ ರಾಜ್ ನಿರ್ಮಿಸಿರುವ ಈ ಚಿತ್ರಕ್ಕೆ ಆಸ್ಕರ್‌ಕೃಷ್ಣ ನಿರ್ದೇಶನವಿದೆ.
ಚಿತ್ರ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಚಿತ್ರತಂಡ, “ಚಡ್ಡಿದೋಸತ್ ಕಡ್ಡಿ ಅಲ್ಲಾಡುಸ್ಬುಟ್ಟ ‘ ಚಿತ್ರದ ಬಗ್ಗೆ ಮತ್ತು ಬಿಡುಗಡೆಗೆ ಮಾಡಿಕೊಂಡಿರುವ ತಯಾರಿಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಾಯಕಕಂ ನಿರ್ದೇಶಕ ಆಸ್ಕರ್ ಕೃಷ್ಣ, “ಸಿನಿಮಾ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಕೋವಿಡ್ ಎರಡನೇ ಹಂತದ ಲಾಕ್ ಡೌನ್ ಅನೌನ್ಸ್ ಆಯ್ತು. ಹೀಗಾಗಿ ಅಂದುಕೊಂಡ ಸಮಯಕ್ಕೆ ಸಿನಿಮಾದ ಬಿಡುಗಡೆ ಸಾಧ್ಯವಾಗಲಿಲ್ಲ’ ಎಂದು ಚಿತ್ರತೆರೆಗೆ ಬರಲು ತಡವಾದ ಕಾರಣ ತೆರೆದಿಟ್ಟರು. ಮತ್ತೂಬ್ಬ ನಾಯಕ ನಟ ಲೋಕೇಂದ್ರ ಸೂರ್ಯ ಅನುಭವ ಹಂಚಿಕೊಂಡರು.
ಇನ್ನು ಚಿತ್ರ ನಿರ್ಮಾಣ ಮತ್ತು ಅಭಿನಯದ ಬಗ್ಗೆ ಮಾತನಾಡಿದ ಖಳನಟ ಕಂ ನಿರ್ಮಾಪಕ ಸೆವೆನ್ ರಾಜ್, “ಸುಮಾರು ಮೂವತ್ತು ವರ್ಷಗಳಹಿಂದೆಯೇ ನಟನಾಗಿ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೆ. ಆದರೆ ಕಾರಣಾಂತರಗಳಿಂದ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಬೇಕೆಂಬ ಆಸೆ ಈಡೇರಿರಲಿಲ್ಲ. ಈಗ “ಚಡ್ಡಿದೋಸ್ತ್ ಕಡ್ಡಿಅಲ್ಲಾಡುಸ್ಬುಟ್ಟ’ ಸಿನಿಮಾದ ಮೂಲಕ ವಿಲನ್ ಮತ್ತು ಪ್ರೊಡ್ನೂಸರ್ ಎರಡೂ ಆಗಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದೇನೆ. ಎಲ್ಲರ ಪರಿಶ್ರಮದಿಂದ ಸಿನಿಮಾ ಚೆನ್ನಾಗಿ ಬಂದಿದೆ. ಮುಂದೆಯೂ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳ ಮೂಲಕ ಗುರುತಿಸಿ ಕೊಳ್ಳಬೇಕೆಂಬ ಆಸೆಯಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.