ಚಾಮರಾಜನಗರ: ಉದಯವಾಣಿ ದಿನಪತ್ರಿಕೆಯ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಹೊರತಂದಿರುವ ಸುವರ್ಣ ಸಂಪದ ವಿಶೇಷ ಸಂಚಿಕೆಯನ್ನು ಶಾಸಕ, ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ ನಗರದಲ್ಲಿ ಬಿಡುಗಡೆ ಮಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕರು, “ಉದಯವಾಣಿ’ 50 ವರ್ಷ ಪೂರೈಸಿರುವ ಕನ್ನಡದ ಹಿರಿಯ ಪತ್ರಿಕೆ ಎಂಬುದು ಹೆಮ್ಮೆಯ ವಿಷಯ.
ಒಂದು ಪತ್ರಿಕೆ 50 ವರ್ಷ ನಡೆದು ಬರುವುದು ಸುಲಭದ ಮಾತಲ್ಲ. ಹೀಗಿರುವಾಗ ಉದಯ ವಾಣಿ ಪತ್ರಿಕೆ ಯನ್ನು ಅದರ ಮಾಲಿ ಕರು ಇಷ್ಟು ವರ್ಷ ಯಶಸ್ವಿಯಾಗಿ ಮುನ್ನಡೆಸಿ ಕೊಂಡು ಬಂದಿರುವುದು ಶ್ಲಾಘ ನೀಯ ಎಂದು ಪ್ರಶಂಸಿಸಿದರು. ಪತ್ರಿಕೆಯು ಗ್ರಾಮೀಣ ಜನರ, ನೊಂದವರ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದೆ. ಸುವರ್ಣ ಮಹೋತ್ಸವ ಸಂಚಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದೊಂದು ಸಂಗ್ರಹಿಸಿಕೊಟ್ಟುಕೊಳ್ಳಬೇಕಾದ ವಿಶೇಷ ಪುಸ್ತಕವಾಗಿದೆ ಎಂದರು.
ಇದನ್ನೂ ಓದಿ:- ಬಿಟ್ ಕಾಯಿನ್ ರಾಜಕೀಯ: ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಚಿವ ಆರಗ ಜ್ಞಾನೇಂದ್ರ
ರಂಗಕರ್ಮಿ, ಹಿರಿಯ ಸಾಹಿತಿ ಕೆ. ವೆಂಕಟರಾಜು ಮಾತನಾಡಿ, ತನ್ನ ಗುಣಮಟ್ಟದ ಮುದ್ರಣ ಸುಂದರ ವಿನ್ಯಾಸಕ್ಕಾಗಿ ಉದಯವಾಣಿ ಹಲವಾರು ಪ್ರಶಸ್ತಿ ಪಡೆದುಕೊಂಡಿದೆ. ಇದರ ದೀಪಾವಳಿ ವಿಶೇಷ ಸಂಚಿಕೆ ಸಾಹಿತ್ಯಿಕವಾಗಿ ಬಹಳ ಮೌಲ್ಯ ವು ಳ್ಳದ್ದು. ನಾವು ಯುವಕರಾಗಿದ್ದಾಗ ಸಂಚಿಕೆಯನ್ನು ಬೆಂಗಳೂರಿನಿಂದ ತರಿಸಿಕೊಳ್ಳುತ್ತಿದ್ದೆವು.
50 ವರ್ಷ ಪೂರೈಸಿರುವ ಉದಯವಾಣಿ ಶತಮಾನೋತ್ಸವ ಆಚರಿಸಲಿ ಎಂದು ಆಶಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತ ನಾಡಿ, ಸಿನಿಮಾ ಸುದ್ದಿ ಸೇರಿ ದಂತೆ ರಾಜಕೀಯ, ಗ್ರಾಮೀಣ, ಕ್ರೀಡಾ ಸುದ್ದಿಗಳಿಗಾಗಿ ಉದಯವಾಣಿ ಯನ್ನು ತಪ್ಪದೇ ಓದುತ್ತೇನೆ. ಸುವರ್ಣ ಮಹೋತ್ಸವ ಆಚರಿಸುತ್ತಿ ರುವ ಸಂದರ್ಭದಲ್ಲಿ ಬಳಗದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ತಾಪಂ ಮಾಜಿ ಅಧ್ಯಕ್ಷ ಚಿಕ್ಕಮಹದೇವ್, ಉದಯವಾಣಿ ಜಿಲ್ಲಾ ವರದಿಗಾರ ಕೆ.ಎಸ್. ಬನಶಂಕರ ಆರಾಧ್ಯ ಉಪಸ್ಥಿತರಿದ್ದರು.