ಬೆಂಗಳೂರು: ಸಿಇಟಿ ಸೀಟು ಹಂಚಿಕೆಯಾದರೂ ಅಭ್ಯರ್ಥಿಗಳ ದಾಖಲಾತಿ ಪ್ರಮಾಣ ಪತ್ರಗಳ ಗೊಂದಲದ ಸಮಸ್ಯೆ ತಪ್ಪಿಲ್ಲ. ಅಂದಾಜು 2 ಸಾವಿರ ಅಭ್ಯರ್ಥಿಗಳ ಮೀಸಲಾತಿ ದಾಖಲೆಗಳ ಪ್ರಮಾಣ ಪತ್ರಗಳು ಸಲ್ಲಿಕೆಯಾಗದೆ ಇರುವುದರಿಂದ ಅಂತಹ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬಿಡುಗಡೆ ಮಾಡಿದೆ.
Advertisement
ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದ ವೇಳೆ ನಮೂದಿಸಿರುವ ಮೀಸಲಾತಿ ಪ್ರಮಾಣ ಪತ್ರಗಳ ಪ್ರತಿಯೊಂದಿಗೆ ಅಭ್ಯರ್ಥಿಗಳು ನ.2ರಂದು ಬೆಳಗ್ಗೆ 10 ಗಂಟೆಗೆ ಕೆಇಎ ಕಚೇರಿಗೆ ಹಾಜರಾಗುವಂತೆ ಕೆಇಎ ಸೂಚಿಸಿದೆ.