ಉಡುಪಿ: ರಾಜ್ಯದ ಸರಕಾರಿ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೀಟ್ ಹಾಗೂ ಸಿಇಟಿ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ನವೆಂಬರ್ ಮೊದಲ ವಾರದಿಂದ ಆಯಾ ಜಿಲ್ಲಾ ಪಂಚಾಯತ್ ಸಹಕಾರದೊಂದಿಗೆ ಈ ತರಬೇತಿ ನಡೆಯಲಿದೆ.
ದ್ವಿತೀಯ ಪಿಯುಸಿ ಅನಂತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಹಾಗೂ ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಎದುರಿಸಬೇಕು. ಈ ಪರೀಕ್ಷೆಗಳ ರ್‍ಯಾಂಕ್ ಆಧಾರದಲ್ಲಿಯೇ ಕೋರ್ಸುಗಳಿಗೆ ಸೀಟು ಹಂಚಿಕೆಯಾಗುತ್ತದೆ. ಹಾಗಾಗಿ ನಿತ್ಯದ ತರಗತಿಯ ಜತೆ ಒಂದು ತಾಸು ತರಬೇತಿ ನೀಡಲಾಗುತ್ತದೆ.
ತಾಲೂಕು ಮಟ್ಟದಲ್ಲಿ ತಯಾರಿ
ತಾಲೂಕು ಮಟ್ಟ ದಲ್ಲಿ ವಿಷಯ ತಜ್ಞರಿಗೆ ತರಬೇತಿ ನೀಡ ಲಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಯನ್ನು ಹೇಗೆ ಎದುರಿಸಬೇಕು, ಸಿದ್ಧತೆ ಹೇಗಿರ ಬೇಕು ಎಂಬ ಜತೆಗೆ ಪ್ರತೀ ವಿಷಯದ ವಿಸ್ತೃತವಾದ ವಿವರಣೆ ನೀಡಲಾಗುತ್ತದೆ. ಹಲವು ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಇಂಥ ತರಬೇತಿ ನೀಡಲಾಗುತ್ತದೆ.
ಕಾಲೇಜುಗಳ ಆಯ್ಕೆ
ತರಬೇತಿಗೆ ಸೂಕ್ತ ಮೂಲ ಸೌಕರ್ಯಗಳಿರುವ ಕಾಲೇಜುಗಳನ್ನು ಆಯ್ಕೆ ಮಾಡ ಲಾಗಿದೆ. ವಿದ್ಯಾರ್ಥಿಗಳು ತಮ್ಮ ಗೊಂದಲ ಬಗೆಹರಿಸಲು ಯಾವ ಕಾಲೇಜುಗಳಲ್ಲಿ ಯಾವ ಯಾವ ವಿಷಯ ತಜ್ಞರು ಲಭ್ಯರಿರುವರು ಎಂಬ ಮಾಹಿತಿಯನ್ನೂ ಆಯಾ ಕಾಲೇಜುಗಳ ಪ್ರಾಂಶುಪಾಲರ ಮೂಲಕ ನೀಡಲಾಗುತ್ತದೆ.
ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಿಗೆ ಸಿಇಟಿ ಮತ್ತು ನೀಟ್ ಕೋಚಿಂಗ್ ನೀಡಲು ವ್ಯವಸ್ಥೆ ಮಾಡಿ ಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಇರುವ ವಿಷಯ ತಜ್ಞರ ಮೂಲಕವೇ ಕೊಡಿಸ ಲಾಗುವುದು. – ಬಿ.ಸಿ. ನಾಗೇಶ್
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ
Related Articles
2021-22ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆೆ
ಹಾಜರಾದವರು-6,83,563
ಪಾಸಾದವರು-4,22,966
ವಿಜ್ಞಾನ
ವಿದ್ಯಾರ್ಥಿಗಳು-2,10,284
ಪಾಸಾದವರು-1,52,525
ದಕ್ಷಿಣ ಕನ್ನಡ
ಹಾಜರಾತಿ – 31,330
ತೇರ್ಗಡೆ – 26,432
ಉಡುಪಿ
ಹಾಜರಾತಿ-15,267
ತೇರ್ಗಡೆ- 12807
ಸಿಇಟಿ ಬರೆದವರು ಒಟ್ಟಾರೆ ರಾಜ್ಯಾ ದ್ಯಂತ 2.10ಲಕ್ಷ ವಿದ್ಯಾರ್ಥಿಗಳು
ನೀಟ್ ಬರೆದವರು- 1.22 ಲಕ್ಷ
-ರಾಜು ಖಾರ್ವಿ ಕೊಡೇರಿ