Advertisement

ಸಿಇಟಿ ಪರೀಕ್ಷೆ ಶೇ. 97 ವಿದ್ಯಾರ್ಥಿಗಳು ಹಾಜರು; ಸುಗಮವಾಗಿ ನಡೆದ ಪರೀಕ್ಷೆ

08:22 PM Jun 17, 2022 | Team Udayavani |

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ-22(ಸಿಇಟಿ) ಎರಡನೇ ದಿನವಾದ ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ವಿಷಯದ ಪರೀಕ್ಷೆಗಳು ನಡೆದಿದ್ದು, ಶೇ.97 ವಿದ್ಯಾರ್ಥಿಗಳು ಹಾಜರಾಗಿದ್ದರು.

Advertisement

ಪರೀಕ್ಷೆಗೆ ನೋಂದಾಯಿಸಿದ್ದ 2,16,559 ವಿದ್ಯಾರ್ಥಿಗಳ ಪೈಕಿ 2,10,962 ವಿದ್ಯಾರ್ಥಿಗಳು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಕ್ಕೆ 2,10,924 ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಶ್ನೆ ಪತ್ರಿಕೆ ಸುಲಭವಾಗಿದ್ದು, ಎಲ್ಲ ಪ್ರಶ್ನೆಗಳು ಪಠ್ಯಕ್ರಮದ ಆಧಾರಿತವಾಗಿಯೇ ಬಂದಿದ್ದವು.

ಯಾವುದೇ ಗೊಂದಲ ಸೃಷ್ಟಿ ಮಾಡುವಂತಹ ಪ್ರಶ್ನೆಗಳು ಕೇಳಿರಲಿಲ್ಲ ಎಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಜೂ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಇದಕ್ಕೆ 1,708 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next