Advertisement

ಸಿಇಟಿ ಕರಡು ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 12 ಸಾವಿರ ಸೀಟು ಕಡಿತ

09:55 PM Sep 14, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವ ಸೀಟುಗಳ ಆಧಾರದಲ್ಲಿ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ (ವಾಸ್ತುಶಿಲ್ಪ)ಕೋರ್ಸ್‌ಗಳ ಕರಡು ಸೀಟ್‌ ಮಾಟ್ರಿಕ್ಸ್‌ ಅನ್ನು ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆ ಪ್ರಕಾರ ಕಳೆದ ವರ್ಷಕ್ಕಿಂತ ಅಂದಾಜು 12 ಸಾವಿರ ಸರಕಾರಿ ಸೀಟು ಕಡಿಮೆಯಾಗಿದೆ.

Advertisement

ಕಳೆದ ವರ್ಷ ಸುಮಾರು 65 ಸಾವಿರ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಾಗಿದ್ದವು. ಈ ಪೈಕಿ 33 ಸಾವಿರ ಸೀಟುಗಳು ಭರ್ತಿಯಾಗಿದ್ದು, 32 ಸಾವಿರ ಸೀಟುಗಳು ಉಳಿಕೆಯಾಗಿದ್ದವು. ಈ ವರ್ಷ ಸದ್ಯ ಕರಡು ಸೀಟ್‌ ಮ್ಯಾಟ್ರಿಕ್ಸ್‌ ಅನ್ನು ಪ್ರಕಟಿಸಿದ್ದು, ಒಟ್ಟಾರೆ 1,11,322 ಸೀಟುಗಳು ಲಭ್ಯವಾಗಿದ್ದು, ಈ ಪೈಕಿ 53,108 ಸರಕಾರಿ ಸೀಟುಗಳು ಲಭ್ಯವಾಗಲಿವೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಎಐಸಿಟಿಇ ಮತ್ತು ಕೌನ್ಸಿಲ್‌ ಆಫ್ ಆರ್ಕಿಟೆಕ್ಟರ್‌ ಕ್ರಮವಾಗಿ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಕೋರ್ಸ್‌ಗಳಿಗೆ ನೀಡಿರುವ ಅನುಮೋದಿತ ಇನ್‌ಟೇಕ್‌ನಂತೆ ರಾಜ್ಯದಲ್ಲಿರುವ ವೃತ್ತಿಪರ ಸಂಸ್ಥೆಗಳಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಕೈಗೊಳ್ಳಬೇಕಿದೆ. ಅದರನ್ವಯ ಕರಡು ಸೀಟ್‌ ಮ್ಯಾಟ್ರಿಕ್ಸ್‌ ಅನ್ನು ಪ್ರಕಟಿಸಲಾಗಿದೆ.

ಸರಕಾರಿ, ಅನುದಾನಿತ, ಖಾಸಗಿ ಕಾಲೇಜು, ಖಾಸಗಿ ಅನುದಾನಿತ ಅಲ್ಪಸಂಖ್ಯಾಕ ಕಾಲೇಜುಗಳು, ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಲಭ್ಯವಿರುವ ಸರಕಾರಿ ಕೋಟಾ, ಖಾಸಗಿ ಕೋಟಾ ಮತ್ತು ಮ್ಯಾನೇಜ್‌ಮೆಂಟ್‌ ಸೀಟುಗಳ ವಿವರಗಳನ್ನು ಸಲ್ಲಿಸಿದೆ.

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಇದರಲ್ಲಿ ಯಾವುದಾದರೂ ಲೋಪದೋಷಗಳಿದ್ದಲ್ಲಿ ಸಾರ್ವಜನಿಕರು ಮತ್ತು ಶಿಕ್ಷಣ ಸಂಸ್ಥೆಗಳು 5 ದಿನಗಳೊಳಗೆ dstechandplang@gmail.com , prshigh-edu@karnataka.gov.in , undersecretaryte@gmail.comಗೆ ಸಲ್ಲಿಸಬಹುದು ಎಂದು ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

Advertisement

ಎಂಜಿನಿಯರಿಂಗ್‌ ಸೀಟುಗಳು
ವಿಭಾಗ ಒಟ್ಟಾರೆ ಸೀಟು ಸರಕಾರಿ ಸೀಟು
ಸರಕಾರಿ ಕಾಲೇಜು 5,140 5,140
ಅನುದಾನಿತ ಕಾಲೇಜು 3,200 3,040
ಖಾಸಗಿ ಕಾಲೇಜು 74,872 33,707
ಅಲ್ಪಸಂಖ್ಯಾಕ 8,910 3,564
ಖಾಸಗಿ ಅನುದಾನ ರಹಿತ 17,160 7,03
ಡೀಮ್ಡ್ ವಿಶ್ವವಿದ್ಯಾನಿಲಯ 2,040 627
ಒಟ್ಟು 1,11,322 53,108

ವಾಸ್ತುಶಿಲ್ಪ
ವಿಭಾಗ ಒಟ್ಟಾರೆ ಸೀಟು ಸರಕಾರಿ ಸೀಟು
ಸರಕಾರಿ ಕಾಲೇಜು 38 38
ಖಾಸಗಿ 1890 851
ಖಾಸಗಿ ವಿಶ್ವವಿದ್ಯಾನಿಲಯ 300 126
ಒಟ್ಟಾರೆ 2,228 1,015

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next