Advertisement

ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಜೆಟ್‌ ಏರ್‌ವೇಸ್ ವಿಮಾನ ಸೇವೆಗೆ ಸಿಕ್ಕಿತು ಅನುಮತಿ

10:47 PM May 08, 2022 | Team Udayavani |

ನವದೆಹಲಿ : ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಜೆಟ್‌ ಏರ್‌ವೇಸ್ ಗೆ ಮತ್ತೆ ರೆಕ್ಕೆ ಸಿಕ್ಕಿದೆ. ವಾಣಿಜ್ಯ ವಿಮಾನ ಸೇವೆಗಳನ್ನು ಪುನಾರಂಭಿಸಲು ಜೆಟ್‌ ಏರ್‌ವೇಸ್ ಸಂಸ್ಥೆಗೆ ಕೇಂದ್ರ ಸರ್ಕಾರ ಭಾನುವಾರ ಭದ್ರತಾ ಅನುಮತಿ ನೀಡಿದೆ.

Advertisement

ಕಂಪನಿಯ ಆಡಳಿತ ಮಂಡಳಿ ನಿಯಂತ್ರಣ/ಷೇರು ಹೊಂದುವಿಕೆ, ಆಪರೇಟರ್‌ ಪರ್ಮಿಟ್‌ನಲ್ಲಿ ಬದಲಾವಣೆ ತರಲೆಂದು ಈ ಅನುಮತಿ ನೀಡಲಾಗಿದೆ. ಮೇ 5ರಂದು ಹೈದರಾಬಾದ್‌ನಲ್ಲಿ ವಿಮಾನದ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ದ ಮುಂದೆಯೂ ಇಂಥ ಪರೀಕ್ಷೆ ನಡೆಸಿ ಯಶಸ್ವಿಯಾದರೆ, ಜೆಟ್‌ ಏರ್‌ವೇಸ್ ಗೆ ಏರ್‌ ಆಪರೇಟರ್‌ ಪ್ರಮಾಣಪತ್ರ ದೊರೆಯಲಿದೆ.
ಇದನ್ನೂ ಓದಿ : ಪ್ರವಾಹ ಬಾಧಿತ ಕೊಳಂಬೆ ಪುನರ್‌ನಿರ್ಮಾಣ: ಬದುಕು ಕಟ್ಟೋಣ ತಂಡದಿಂದ 12 ಮನೆ ಗೃಹಪ್ರವೇಶ

Advertisement

Udayavani is now on Telegram. Click here to join our channel and stay updated with the latest news.

Next