Advertisement

ಪಿಜಿ ಮೆಡಿಕಲ್‌: ಕಟ್‌ ಆಫ್ ಅಂಕ ಇಳಿಕೆ

11:22 PM Oct 17, 2022 | Team Udayavani |

ಹೊಸದಿಲ್ಲಿ: ವೈದ್ಯ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಕಟ್‌ ಆಫ್ ಅಂಕಗಳ ಪ್ರಮಾಣವನ್ನು ಶೇ.25 ಕಡಿಮೆಗೊಳಿಸುವುದರ ಬಗ್ಗೆ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದೆ. ಈ ನಿಯಮ ಎಲ್ಲ ವರ್ಗಗಳಿಗೂ ಅನ್ವಯವಾಗಲಿದೆ.

Advertisement

2022-23ನೇ ಸಾಲಿನ ವೈದ್ಯ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಈ ನಿಯಮ ಅನ್ವಯವಾಗಲಿದೆ.

ಕಳೆದ ವರ್ಷ ದೇಶಾ ದ್ಯಂತ 1,400ಕ್ಕೂ ಅಧಿಕ ಮೆಡಿಕಲ್‌ ಪಿ.ಜಿ. ಸೀಟುಗಳು ಭರ್ತಿ ಯಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯ ಆಯೋಗ ಸೋಮವಾರ ನಿರ್ಧಾರ ಪ್ರಕಟಿಸಿದೆ.

ಜನರಲ್‌ ಮೆರಿಟ್‌ಗೆ ಶೇ.25, ದಿವ್ಯಾಂಗರು (ಜನರಲ್‌ ಮೆರಿಟ್‌) ಶೇ.20, ಎಸ್‌ಸಿ, ಎಸ್‌ಟಿ, ಒಬಿಸಿಗೆ ಮತ್ತು ದಿವ್ಯಾಂಗರು (ಎಸ್‌ಸಿ, ಎಸ್‌ಟಿ, ಒಬಿಸಿ) ಶೇ.15 ಕಟ್‌ ಆಫ್ ಅಂಕಗಳನ್ನು ಇಳಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next