Advertisement

ಗರ್ಭಪಾತದ ಗರಿಷ್ಠ ಮಿತಿ ಹೆಚ್ಚಳ

12:12 PM Oct 14, 2021 | Team Udayavani |

ಹೊಸದಿಲ್ಲಿ: ಗರ್ಭಪಾತಕ್ಕೆ ಇರುವ ಗರಿಷ್ಠ ಕಾಲ ಮಿತಿಯನ್ನು 20ರಿಂದ 24 ವಾರಗಳಿಗೆ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದೆ.ಗರ್ಭಪಾತ,ಕೇಂದ್ರ ಸರಕಾರ,

Advertisement

ಇದಕ್ಕಾಗಿ 2021ರ “ಮೆಡಿಕಲ್‌ ಟರ್ಮಿ ನೇಶನ್‌ ಆಫ್ ಪ್ರಗ್ನೆನ್ಸಿ ಆ್ಯಕ್ಟ್’ (ತಿದ್ದುಪಡಿ) ತರಲಾಗಿದ್ದು, ಸೀಮಿತ ವ್ಯಕ್ತಿಗಳಿಗೆ ಮತ್ತು ಸೀಮಿತ ಸಂದರ್ಭಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ಕಟ್ಟುನಟ್ಟಾಗಿ ಸೂಚಿಸಲಾಗಿದೆ.

ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಸೂಚನೆ
ಹಳೆಯ ನಿಯಮಗಳನುಸಾರ, ಗರ್ಭ ಪಾತವನ್ನು ಗರ್ಭಧಾರಣೆ ಆರಂಭದಿಂದ 12 ವಾರಗಳ ಒಳಗಾಗಿ ಕೈಗೊಳ್ಳುವುದಿದ್ದರೆ ಅದಕ್ಕೆ ಒಬ್ಬ ವೈದ್ಯರ ನಿರ್ಧಾರ ಸಾಕಿತ್ತು. 12 ವಾರಗಳಿಂದ 20 ವಾರಗಳ ಅವಧಿಯಲ್ಲಿ ಗರ್ಭಪಾತ ಕೈಗೊಳ್ಳುವುದಿದ್ದರೆ ಅದಕ್ಕೆ ಇಬ್ಬರು ವೈದ್ಯರ ಒಪ್ಪಿಗೆ ಅಗತ್ಯವಿತ್ತು. ಹೊಸ ನಿಯಮದಡಿ, ಆಯಾ ರಾಜ್ಯಮಟ್ಟದಲ್ಲಿ ಗರ್ಭಪಾತವನ್ನು ನಿರ್ಧರಿಸಲೆಂದು ಪ್ರತ್ಯೇಕ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಬೇಕಿದ್ದು, ಆ ಮಂಡಳಿಯ ಅನುಮತಿ ಇದ್ದೇ ಗರ್ಭಪಾತ ಪ್ರಕ್ರಿಯೆ ನಡೆಸುವುದು ಕಡ್ಡಾಯವಾಗಲಿದೆ.

ಇದನ್ನೂ ಓದಿ:ರಾಜನಾಥ ಸಿಂಗ್ ಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು: ಓವೈಸಿ

ಮೂರು ದಿನಗಳಲ್ಲಿ ನಿರ್ಧಾರ
ಯಾವುದೇ ತಾಯಿ, ತನ್ನ ಗರ್ಭಪಾತಕ್ಕೆ ಈ ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಆಗ, ತಾಯಿ ಮತ್ತು ಗರ್ಭಸ್ಥ ಭ್ರೂಣದ ಸ್ಥಿತಿಗತಿಗಳನ್ನು, ಸಂಬಂಧಿಸಿದ ಇತರ ವರದಿಗಳನ್ನು ಸೂಕ್ತವಾಗಿ ಅಧ್ಯಯನ ಮಾಡುವ ಮಂಡಳಿಯ ತಜ್ಞರು ಗರ್ಭಪಾತ ಬೇಕೋ, ಬೇಡವೋ ಎಂಬ ಬಗ್ಗೆ ಅರ್ಜಿ ಸಲ್ಲಿಕೆಯಾದ ಮೂರು ದಿನಗಳಲ್ಲಿ ನಿರ್ಧಾರ ಪ್ರಕಟಿಸಬೇಕಿದೆ.

Advertisement

ಯಾರ್ಯಾರಿಗೆ ಅನ್ವಯ?
– ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದರೆ
– ನಿಷಿದ್ಧವಿರುವ ಸಂಬಂಧಗಳ ನಡುವೆ ನಡೆಯುವ ಲೈಂಗಿಕ ಸಂಪರ್ಕಗಳಿಂದ ಗರ್ಭಿಣಿಯಾದವರಿಗೆ
– ಅಪ್ರಾಪ್ತರಿಗೆ, ದಿವ್ಯಾಂಗರಿಗೆ, ಮಾನಸಿಕ ಅಸ್ವಸ್ಥೆಯರಿಗೆ
– ವಿಧವೆ ಹಾಗೂ ವಿಚ್ಛೇದಿತರಾಗಿದ್ದು ಮಗು ಜನನದಿಂದ ಸಮಾಜದಲ್ಲಿ ಸ್ಥಾನ ಮಾನ ಬದಲಾಗುವ ಭೀತಿ ಇರುವವರಿಗೆ
– ಗರ್ಭಸ್ಥ ಶಿಶುವಿಗೆ ಗಂಭೀರ ಸ್ವರೂಪದ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿದ್ದರೆ.

 

Advertisement

Udayavani is now on Telegram. Click here to join our channel and stay updated with the latest news.

Next