Advertisement
ಪಿಎಂ-ಪ್ರಣಾಮ್ ಯೋಜನೆಪ್ರಧಾನಮಂತ್ರಿ ಕೃಷಿ ನಿರ್ವಹಣೆಯಲ್ಲಿ ಪರ್ಯಾಯ ಪೋಷಕಾಂಶಗಳ ಉತ್ತೇಜನ(ಪಿಎಂ-ಪ್ರಣಾಮ್) ಯೋಜನೆಯನ್ನು ದೇಶದಲ್ಲಿ ರಸಗೊಬ್ಬರ ಪ್ರಮಾಣವನ್ನು ಕ‚ಡಿಮೆ ಮಾಡಬೇಕು ಎಂಬ ಉದ್ದೇಶದಿಂದ ರೂಪಿಸಲಾಗಿದೆ. ಮೂಲಗಳು ಹೇಳುವಂತೆ, ಸದ್ಯದಲ್ಲೇ ಇದು ಜಾರಿಗೆ ಬರಲಿದೆ. ವರ್ಷವೊಂದರಲ್ಲಿ ಕಡಿಮೆ ರಸಗೊಬ್ಬರ ಬಳಕೆ ಮಾಡುವ ರಾಜ್ಯಕ್ಕೆ ಇನ್‌ಸೆಂಟೀವ್ ನೀಡಲಾಗುತ್ತದೆ. ಜತೆಗೆ ಮೂರು ವರ್ಷಗಳ ಅಂದಾಜು ತೆಗೆದುಕೊಂಡು, ಕಡಿಮೆ ರಸಗೊಬ್ಬರ ಬಳಕೆ ಮಾಡಿದ್ದರೆ ಅದಕ್ಕೂ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಕೇಂದ್ರದ ಖಜಾನೆ ಮೇಲಿನ ಹೊರೆ ತಪ್ಪಿಸುವುದೇ ಇದರ ಪ್ರಮುಖ ಉದ್ದೇಶ. ಭಾರತದಲ್ಲಿ ಮುಖ್ಯವಾಗಿ ಯೂರಿಯಾ, ಡಿಎಪಿ, ಎಂಬಿಪಿ, ಎನ್‌ಪಿಕೆಎಸ್ ಅನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. 2017-18ರಿಂದ 2021-22ರ ಅವಧಿಯಲ್ಲಿ ಈ ರಸಗೊಬ್ಬರದ ಬಳಕೆ ಪ್ರಮಾಣ ಶೇ.21ರಷ್ಟು ಹೆಚ್ಚಾಗಿದೆ. ಬಳಕೆ ಪ್ರಮಾಣ ಹೆಚ್ಚಾದಂತೆ, ಕೇಂದ್ರ ನೀಡಬೇಕಾಗಿರುವ ಸಬ್ಸಿಡಿ ಪ್ರಮಾಣವೂ ಹೆಚ್ಚಾಗುತ್ತದೆ. ಅಂದರೆ, ಕಳೆದ ವರ್ಷ ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರಕಾರ 1.62 ಲಕ್ಷ ಕೋಟಿ ರೂ. ವ್ಯಯ ಮಾಡಿತ್ತು. ಈ ವರ್ಷ 2.25 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ಈ ಹೊರೆಯನ್ನು ತಪ್ಪಿಸುವ ಉದ್ದೇಶ ಕೇಂದ್ರದ್ದು. ಯಾವಾಗ ಜಾರಿ?
ಸೆ.7ರಂದು ನಡೆದ ಸಭೆಯಲ್ಲಿ ಇದರ ಪ್ರಸ್ತಾವವಾಗಿದೆ. ಅಂತರ ಸಚಿವಾಲಯಗಳ ನಡುವಿನ ಚರ್ಚೆ ಬಳಿಕ ಇದನ್ನು ಜಾರಿಗೊಳಿಸ ಬಹುದು ಎಂದು ಹೇಳಲಾಗಿದೆ.