Advertisement

Airport ಲಕ್ಷದ್ವೀಪಕ್ಕೆ ಸಿಗಲಿದೆ ಹೊಸ ವಿಮಾನ ನಿಲ್ದಾಣ

01:16 AM Jan 10, 2024 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇ ತಡ, ಅಲ್ಲಿಗೆ ಭೇಟಿ ನೀಡಲು ಆಸಕ್ತಿ ತೋರುತ್ತಿರುವವರ ಸಂಖ್ಯೆ ನೂರಾರು ಪಟ್ಟು ಏರಿದೆ. ಇಂತಹ ಹೊತ್ತಿನಲ್ಲೇ ಅಲ್ಲಿಯ ಮಿನಿಕಾಯ್‌ ದ್ವೀಪದಲ್ಲಿ ಹೊಸ ವಿಮಾನನಿಲ್ದಾಣ ನಿರ್ಮಿಸಲು ಕೇಂದ್ರ ಸರಕಾರ ಯೋಜಿಸಿದೆ. ಭಾರತೀಯ ಸೇನೆ ಮತ್ತು ನಾಗರಿಕರ ಬಳಕೆಗೆ ಅನುಕೂಲವಾಗುವಂತೆ ಇದನ್ನು ಸಜ್ಜುಗೊಳಿಸಲು ಚಿಂತಿಸಲಾಗಿದೆ. ಈ ಹಿಂದೆ ಬರೀ ಸೇನಾ ಉದ್ದೇಶಕ್ಕಾಗಿ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಕಳುಹಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

Advertisement

ಸೇನೆ ಮತ್ತು ನಾಗರಿಕ ಬಳಕೆಗೆ ಅನುಕೂಲ ವಾಗುವಂತಹ ವಿಮಾನನಿಲ್ದಾಣ ನಿರ್ಮಿಸು ವುದು ಯೋಜನೆಯಾಗಿದೆ. ನೂತನ ನಿಲ್ದಾಣ ಯುದ್ಧವಿಮಾನಗಳು ಮತ್ತು ಇತರ ಸೇನಾ ವಿಮಾನಗಳು, ವಾಣಿಜ್ಯ ವಿಮಾನಗಳ ಕಾರ್ಯಾ ಚರಣೆಗೆ ಅನುಕೂಲವಾಗುವಂತೆ ಇರಬೇಕು ಎನ್ನುವುದು ನಮ್ಮ ನಿಲುವು ಎಂದು ಸೇನಾ ಮೂಲಗಳು ಹೇಳಿವೆ.

ಏನು ಲಾಭ?
1.ಏಕಕಾಲದಲ್ಲಿ ಸೇನೆ ಮತ್ತು ನಾಗರಿಕರು ಈ ನಿಲ್ದಾಣವನ್ನು ಸಂಚಾರಕ್ಕೆ ಬಳಸಬಹುದು.
2.ಇಲ್ಲಿಂದ ಅರಬಿ ಸಮುದ್ರ ವಲಯ ಮತ್ತು ಹಿಂದೂ ಮಹಾಸಾಗರದ ಮೇಲೆ ಕಣ್ಣಿಡಲು ಭಾರತೀಯ ವಾಯುಸೇನೆಗೆ ಸಾಧ್ಯವಾಗಲಿದೆ.
3.ಇತ್ತೀಚೆಗೆ ಅರಬಿ ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ಪದೇಪದೆ ದಾಳಿಗಳು ನಡೆಯುತ್ತಿವೆ. ಅಂತಹ ದಾಳಿಗಳನ್ನು ನಿಗ್ರಹಿಸಲು ಕೂಡ ಸಹಾಯವಾಗಲಿದೆ.
4.ಲಕ್ಷದ್ವೀಪದಲ್ಲಿ ಪ್ರವಾಸೋ ದ್ಯಮದ ಬೆಳವಣಿಗೆಗೂ ಸಹಕಾರಿಯಾಗಲಿದೆ.

ಮಾಲ್ದೀವ್ಸ್‌ ಸರಕಾರಕ್ಕೆ ಕುತ್ತು?
ವಿನಾಕಾರಣ ಭಾರತದ ವಿರುದ್ಧ ಕಾಲುಕೆರೆದು ಜಗಳ ಮಾಡಿದ ಮಾಲ್ದೀವ್ಸ್‌ ಈಗ ಸಂಪೂರ್ಣವಾಗಿ ಇಕ್ಕಟ್ಟಿಗೆ ಸಿಲುಕಿದೆ. ಅಲ್ಲಿನ ಆಡಳಿತಾರೂಢ ಪಿಎನ್‌ಸಿ ನಾಯಕ, ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ವಿರುದ್ಧ ವಿಪಕ್ಷಗಳು ತಿರುಗಿಬಿದ್ದಿದ್ದು, ಸರಕಾರದ ವಿರುದ್ಧ ಅವಿಶ್ವಾಸಗೊತ್ತು ವಳಿ ಮಂಡಿ ಸಲು ಮುಂದಾಗಿವೆ. ಮೊಹಮ್ಮದ್‌ಮುಯಿಜ್ಜು ಸರಕಾರವು ದೇಶವನ್ನು ಅತಂತ್ರಗೊಳಿಸುತ್ತಿದೆ, ಅದನ್ನು ಅಧಿಕಾರದಿಂದ ಕಿತ್ತೂಗೆಯಲು ಅವಿಶ್ವಾಸ ಗೊತ್ತುವಳಿ ಮಂಡಿಸಬೇಕೆಂದು ಪ್ರಧಾನ ವಿಪಕ್ಷವಾಗಿರುವ ಎಂಡಿಪಿ ನಾಯಕ ಅಜೀಮ್‌ ಅಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next