Advertisement

ಟ್ರಂಪ್‌ ಭೇಟಿಗೆ 38 ಲಕ್ಷ ರೂ. ವೆಚ್ಚ!

09:38 PM Aug 18, 2022 | Team Udayavani |

ನವದೆಹಲಿ: 2020ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್‌ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಕೇಂದ್ರ ಸರ್ಕಾರವು ಅವರಿಗೆಂದು ಒಟ್ಟು 38 ಲಕ್ಷ ರೂ. ಖರ್ಚು ಮಾಡಿದೆ.

Advertisement

ಈ ಖರ್ಚುವೆಚ್ಚದ ಕುರಿತಾಗಿ ಆರ್‌ಟಿಐಗೆ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರವಾಗಿ ವಿದೇಶಾಂಗ ಸಚಿವಾಲಯ ಈ ಮಾಹಿತಿ ಕೊಟ್ಟಿದೆ.

ಟ್ರಂಪ್‌, ಅವರ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಮತ್ತು ಅಳಿಯ ಜರೇದ್‌ ಖುಷ°ರ್‌ ಒಟ್ಟು 36 ತಾಸುಗಳ ಕಾಲ ಭಾರತದಲ್ಲಿದ್ದರು. ಅವರು ಆಗ್ರಾ, ಅಹಮದಾಬಾದ್‌ ಮತ್ತು ದೆಹಲಿಗೆ ಪ್ರಯಾಣ ಮಾಡಿದ್ದರು. ಟ್ರಂಪ್‌ಗೋಸ್ಕರ ಅಹಮದಾಬಾದ್‌ನಲ್ಲಿ 22ಕಿ.ಮೀ.ಗಳ ರೋಡ್‌ ಶೋ, ಮೋದಿ ಮೈದಾನದಲ್ಲಿ “ನಮಸ್ತೆ ಟ್ರಂಪ್‌’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟ್ರಂಪ್‌ ಕುಟುಂಬದ ಊಟೋಪಚಾರ ಎಲ್ಲವೂ ಸೇರಿ ಸರ್ಕಾರ ಒಟ್ಟು 38 ಲಕ್ಷ ರೂ. ಖರ್ಚು ಮಾಡಿದೆ ಎಂದು ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next