Advertisement
ಆಪ್ ನಾಯಕ ಸಂಜಯ್ ಸಿಂಗ್, ಆರ್‌ಜೆಡಿಯ ತೇಜಸ್ವಿ ಯಾದವ್, ಜೆಡಿಯು ನಾಯಕ ಉಪೇಂದ್ರ ಕುಶ್ವಾಹ, ಬಿಜೆಪಿ ಸಂಸದ ವರುಣ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸೇನೆ, “ಜಾತಿ, ಧರ್ಮದ ಪ್ರಮಾಣಪತ್ರ ಪಡೆಯುವುದು ಹೊಸದೇನಲ್ಲ. ಹಿಂದಿನಿಂದಲೂ ಇದು ಚಾಲ್ತಿಯಲ್ಲಿದೆ. ಸೇವೆಯಲ್ಲಿದ್ದಾಗ ಯೋಧರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರದ ವಿಧಿವಿಧಾನ ಪೂರೈಸಬೇಕೆಂದರೆ ಜಾತಿ ಗೊತ್ತಿರಬೇಕು ಎಂಬ ಕಾರಣಕ್ಕೆ ಇದು ಜಾರಿಯಲ್ಲಿದೆ’ ಎಂದಿದೆ. ಈ ಆರೋಪಗಳೆಲ್ಲ ಕೇವಲ ವದಂತಿ ಎಂದು ಸಚಿವ ರಾಜನಾಥ್‌ಸಿಂಗ್ ಹೇಳಿದ್ದಾರೆ. ಪ್ರತಿಪಕ್ಷಗಳ ನಾಯಕರು ಸೇನೆಯನ್ನು ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
“ಅಗ್ನಿಪಥ’ ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ. ಜತೆಗೆ, ಕೇರಳ, ಪಂಜಾಬ್ ಮತ್ತು ಹರ್ಯಾಣ, ಪಾಟ್ನಾ, ಉತ್ತರಾಖಂಡಗಳ ಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನೂ ಆಯಾ ಹೈಕೋರ್ಟ್‌ಗಳು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಬಹುದು ಅಥವಾ ದೆಹಲಿ ಹೈಕೋರ್ಟ್‌ನ ತೀರ್ಪು ಬರುವವರೆಗೂ ಕಾಯಬಹುದು ಎಂದೂ ಸುಪ್ರೀಂ ನ್ಯಾಯಪೀಠ ಹೇಳಿದೆ.