Advertisement
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನೇತೃತ್ವದ ಸರ್ಕಾರ ರೈತರ ಕಲ್ಯಾಣಕ್ಕಾಗಿ ಬದ್ಧವಾಗಿದೆ. ನಾವು ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ, ಆದರೇ, ಕೃಷಿ ಕಾನೂನುಗಳು ದೋಷಯುಕ್ತವಾಗಿದೆ ಎಂದು ಯಾರೂ ಹೇಳಬಾರದು. ಉತ್ತರವನ್ನು ನೀಡುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಸಿಂಗ್ ಹೇಳಿದ್ದಾರೆ.
Related Articles
Advertisement
ರೈತರೊಂದಿಗೆ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ತಿದ್ದುಪಡಿಯ ಭವಿಷ್ಯದ ಬಗ್ಗೆ ನಾನು ವಿವರಿಸಿದ್ದೆ. ಮಾತ್ರವಲ್ಲದೇ, ತಿದ್ದುಪಡಿಯ ಪ್ರಸ್ತಾಪಗಳು ಕಾನೂನುಗಳಲ್ಲಿ ದೋಷವಿದೆ ಎಂಬರ್ಥವಲ್ಲ ಎಂದು ತೋಮರ್ ಹೇಳಿದ್ದಾರೆ.
ಇನ್ನು, ಈ ವಿಷಯವನ್ನು ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ಸಂಸತ್ತಿನಲ್ಲಿ ಸರ್ಕಾರದ ಧ್ಯೇಯ ಹಾಗೂ ಉದ್ದೇಶಗಳ ಬಗ್ಗೆ ನಾನು ಸಂಪೂರ್ಣವಾಗಿ ವಿವರಿಸಿದ್ದೇನೆ. ವಿರೋಧ ಪಕ್ಷದವರ ಅಭಿಪ್ರಾಯಗಳನ್ನು ನಾವು ಆಲಿಸಿದ್ದೇವೆ. ಅಧ್ಯಕ್ಷರ ಭಾಷಣದ ನಂತರವೂ ವಿರೋಧ ಪಕ್ಷದವರು ರೈತರ ಪ್ರತಿಭಟನೆಯ ಬಗ್ಗೆ ಮಾತ್ರ ಮಾಡುತ್ತಾರೆ ಹೊರತಾಗಿ ಕಾನೂನಿನ ಬಗ್ಗೆ ಮಾತನಾಡುವುದಿಲ್ಲ ಎಂದು ತೋಮರ್ ಹೇಳಿದ್ದಾರೆ.
ಓದಿ : ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ: ದಾಸಯ್ಯನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪೂಜಾರಿ!
ವಿರೋಧ ಪಕ್ಷದ ನಾಯಕರ ನಡೆಯ ಬಗ್ಗೆ ನನಗೆ ಬೇಸರ ತಂದಿದೆ. ಪ್ರತಿ ಸಮಯದಲ್ಲೂ ಅವರು ವಿನಾಕಾರಣ ಚರ್ಚೆ ಮಾಡುತ್ತಾರೆ. ಅವರು ವಿರೋಧಿಸಿದ ಕಾನೂನುಗಳ ಬಗ್ಗೆ ಅವರು ಎಂದು ಮಾತಾಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ರಾಜಕೀಯ ಮಾಡುವ ಅವಕಾಶವಿದೆ. ಆದರೇ, ರೈತರ ಹಿತಾಸಕ್ತಿ, ರಾಷ್ಟ್ರೀಯ ಆರ್ಥಿಕತೆಯ ವಿಷಯದಲ್ಲಿ ರಾಜಕೀಯ ಮಾಡಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಬದಲಾವಣೆಗಳನ್ನು ತಂದಾಗ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟ. ಕೆಲವರು ಅದನ್ನು ಟೀಕೆ ಮಾಡುತ್ತಾರೆ, ಕೆಲವರು ಪ್ರತಿಭಟಿಸುತ್ತಾರೆ. ಬದಲಾವಣೆಯ ಹಿಂದೆ ಉತ್ತಮವಾದ ನೀತಿ ಮತ್ತು ಉದ್ದೇಶವಿದ್ದರೆ ಜನರು ಅದನ್ನು ಖಂಡಿತವಾಗಿ ಒಪ್ಪಿಯೇ ಒಪ್ಪುತ್ತಾರೆ ಎಂದು ಕೃಷಿ ಸಚಿವರು ಹೇಳಿದ್ದಾರೆ.
ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿಕ್ಕಿರುವ ಕಾರಣದಿಂದಾಗಿ ಈ ವಿಷಯವನ್ನು ವಿರೋಧ ಪಕ್ಷಗಳು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಒಳಗೊಂಡು ಕೆಲವು ವಿರೋಧ ಪಕ್ಷದ ನಾಯಕರು ರಾಜಕೀಯ ಲಾಭಗಳಿಸುವುದಕ್ಕಾಗಿ ಪಟ್ಟು ಬಿಡದೆ ಕೇಂದ್ರ ಸರ್ಕಾರವನ್ನು ಈ ವಿಷಯದಲ್ಲಿ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಓದಿ : ಮತ ನೀಡದಿದ್ದರೆ ನೀರು, ವಿದ್ಯುತ್ ಏನೂ ಕೊಡಲ್ಲ.. ಮತದಾರರಿಗೆ ಸಚಿವರ ಬೆದರಿಕೆ