ಮುಂಬಯಿ: ಕೈಗಾರಿಕೋದ್ಯಮಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ಕೇಂದ್ರ ಸರಕಾರವು ಸಿಆರ್ ಪಿಎಫ್ ಕಮಾಂಡೋಗಳ ‘ಝಡ್ ‘ ವರ್ಗದ ವಿಐಪಿ ಭದ್ರತೆಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಭಾರತದಾದ್ಯಂತ ರಕ್ಷಣೆ “ಪಾವತಿ ಆಧಾರದ ಮೇಲೆ” ಇರುತ್ತದೆ ಮತ್ತು ತಿಂಗಳಿಗೆ ಸುಮಾರು 15-20 ಲಕ್ಷ ರೂಪಾಯಿ ವೆಚ್ಚವಿರಲಿದೆ.
ಕೇಂದ್ರ ಭದ್ರತಾ ಏಜೆನ್ಸಿಗಳು ಸಿದ್ಧಪಡಿಸಿದ ಬೆದರಿಕೆ ಗ್ರಹಿಕೆ ವರದಿಯ ಆಧಾರದ ಮೇಲೆ ಕೇಂದ್ರೀಯ ಪಟ್ಟಿಯ ಅಡಿಯಲ್ಲಿ ಭದ್ರತೆಯನ್ನು 60 ರ ಹರೆಯದ ಅದಾನಿ ಅವರಿಗೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಕೇಂದ್ರ ಗೃಹ ಸಚಿವಾಲಯವು ಸಿಆರ್‌ಪಿಎಫ್ ವಿಐಪಿ ಭದ್ರತಾ ವಿಭಾಗವನ್ನು ಕೆಲಸವನ್ನು ವಹಿಸಿಕೊಳ್ಳುವಂತೆ ಕೇಳಿದ್ದು, ಮತ್ತು ಅದರ ತಂಡ ಈಗ ಭದ್ರತೆ ಒದಗಿಸುತ್ತಿದೆ.
ಮುಖೇಶ್ ಅಂಬಾನಿ ಅವರಿಗೆ ಈಗಾಗಲೇ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ.