Advertisement

ಯುದ್ಧ ಪೀಡಿತ ಅಫ್ಗಾನಿಸ್ತಾನದಲ್ಲಿ ಸಿಲುಕಿದ ಭಾರತೀಯರನ್ನು ಕರೆತರಲು ಪ್ರಯತ್ನ : ಸಿಂಧಿಯಾ

02:51 PM Aug 18, 2021 | Team Udayavani |

ನವ ದೆಹಲಿ : ಯುದ್ಧ ಪೀಡಿತ ಅಫ್ಗಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮೂಲ ಭಾರತೀಯರನ್ನು ವಾಪಸ್‌ ಕರೆತರಲು ಕೇಂದ್ರ ಸರ್ಕಾರ ಸರ್ವ ಪ್ರಯತ್ನ ಮಾಡಲಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

Advertisement

ಇದನ್ನೂ ಓದಿ : 5,375 ಕೋಟಿ ರೂ ಮೊತ್ತದಲ್ಲಿ ‘ಎಫ್‌404–ಜಿಇ–ಐಎನ್‌ 20’ ಎಂಜಿನ್‌ ಖರೀದಿಸಲಿದೆ ಎಚ್‌ಎಎಲ್‌..!

ಈ ಬಗ್ಗೆ ಮಧ್ಯಪ್ರದೇಶದ ಶಹಜಪುರದಲ್ಲಿ ‘ಜನ ಆರ್ಶೀವಾದ ಯಾತ್ರೆ’ಯ ಸಂದರ್ಭದಲ್ಲಿ  ಪ್ರತಿಕ್ರಿಯಿಸಿದ ಸಿಂಧಿಯಾ, ಜಗತ್ತಿನಾದ್ಯಂತ ಕೋವಿಡ್ ಸೋಂಕು ಹೆಚ್ಚಿದ್ದಾಗ, ವಿದೇಶಗಳಲ್ಲಿದ್ದ ಭಾರತೀಯರನ್ನು ’ವಂದೇ ಭಾರತ್‌ ಮಿಷನ್‌’ ಮೂಲಕ ದೇಶಕ್ಕೆ ಕರೆತರಲಾಯಿತು. ಹಾಗೆಯೇಭಾರತೀಯ ವಾಯುಪಡೆ, ಏರ್‌ ಇಂಡಿಯಾ ಸೇರಿದಂತೆ ಸಾಧ್ಯವಾದ ಎಲ್ಲಾ ಮಾರ್ಗಗಳಿಂದ ಭಾರತೀಯರನ್ನು ಕರೆತರಲಾಗುವುದು’ ಎಂದು ಸಿಂಧಿಯಾ ತಿಳಿಸಿದ್ದಾರೆ.

ಇನ್ನು, ಶುಕ್ರವಾರವೇ ಅಫ್ಗಾನಿಸ್ತಾನದಿಂದ ದೇಶಕ್ಕೆ ಭಾರತೀಯ ಮೂಲ ವಾಸಿಗಳನ್ನು ಕರೆ ತರಲು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಪ್ರಕ್ರಿಯೆ ಮೂರು ದಿನಗಳವರೆಗೆ ಮುಂದುವರಿಯಿತು. ಆದರೆ, ಭಾನುವಾರ, ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಮತ್ತೆ ಯುದ್ಧ ಸಂಘರ್ಷಗಳ ವಾತಾವರಣ ಕಾಣಿಸಿಕೊಂಡ ಕಾರಣ ವಿಮಾನ ಮಾರ್ಗವನ್ನು ಮುಚ್ಚಲಾಗಿತ್ತು. ಇದರಿಂದಾಗಿ ಸೋಮವಾರ(ಆಗಸ್ಟ್ 16) ಸ್ಥಳಾಂತರ ಪ್ರಕ್ರಿಯೆಗೆ ಅಡ್ಡಿಯಾಯಿತು. ಮಂಗಳವಾರ(ಆಗಸ್ಟ್ 17) ವಾಯುಪಡೆಯ ವಿಮಾನದ ಮೂಲಕ ಭಾರತೀಯರನ್ನು ವಾಪಾಸ್ಸ್ ಕರೆತರಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :  ಸಾಧ್ಯವಿದ್ದಲ್ಲಿ ಆಫ್ ಲೈನ್ ತರಗತಿ ಆರಂಭಿಸಲು ಗೋವಾ ಸರ್ಕಾರ ಅನುಮತಿ..!

Advertisement
Advertisement

Udayavani is now on Telegram. Click here to join our channel and stay updated with the latest news.

Next