ನವದೆಹಲಿ: ಅತ್ಯಂತ ಅಪರೂಪದ ಕಾಯಿಲೆಗಳಿಗೆ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಔಷಧಗಳಿಗೆ ವಿಧಿಸಲಾಗುತ್ತಿದ್ದ ಪ್ರಾಥಮಿಕ ಮಟ್ಟದ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಮುಂದಿನ ತಿಂಗಳ ಒಂದನೇ ತಾರೀಕಿನಿಂದ ಹೊಸ ನಿಯಮ ಅನ್ವಯವಾಗಲಿವೆ.
ಇದಲ್ಲದೆ ಕೆಲ ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾಗುವ ಪೆಂಬ್ರೋಲಿಜಿಮ್ಯಾಬ್ (Pembrolizumab)ಗೆ ಕೂಡ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಸದ್ಯ ಎಲ್ಲಾ ಔಷಧಗಳಿಗೆ ಶೇ.10 ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ಇನ್ನು ಕೆಲವಕ್ಕೆ ಶೇ.5 ಸುಂಕ ಇರಲಿದೆ. ಈ ರಿಯಾಯಿತಿ ಪಡೆಯುವ ನಿಟ್ಟಿನಲ್ಲಿ ಆಮದು ಮಾಡಿಕೊಳ್ಳುವವರು ಕೇಂದ್ರ, ರಾಜ್ಯ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಸೂಕ್ತ ಪ್ರಮಾಣ ಪತ್ರ ಪಡೆದಿರಬೇಕಾಗುತ್ತದೆ.