Advertisement

ಪಠ್ಯಕ್ರಮ ಪರಿಷ್ಕರಣೆಗೆ ಇಬ್ಬರು ಕನ್ನಡಿಗರುಳ್ಳ ಹೊಸ ಸಮಿತಿ

12:07 AM Sep 23, 2021 | Team Udayavani |

ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪಠ್ಯಪುಸ್ತಕಗಳನ್ನು ರಚಿಸುವ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಕೌನ್ಸಿಲ್‌ನ (ಎನ್‌ಸಿಇಆರ್‌ಟಿ) ಪಠ್ಯ ಮತ್ತು ಪಠ್ಯಕ್ರಮವನ್ನು ಪರಿಷ್ಕರಿಸಲು ಕೇಂದ್ರ ಸರಕಾರ ಮುಂದಾಗಿದೆ.

Advertisement

ಕನ್ನಡಿಗರಾದ, ಇಸ್ರೋದ ಮಾಜಿ ಅಧ್ಯಕ್ಷ ಡಾ| ಕಸ್ತೂರಿ ರಂಗನ್‌ ಅವರು ಈ ಸಮಿ ತಿಯ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕರಡು ಸಮಿತಿಗೂ ಇವರೇ ಅಧ್ಯಕ್ಷರಾಗಿದ್ದರು. ಇವರಲ್ಲದೆ, ಮತ್ತೂಬ್ಬ ಕನ್ನಡಿಗ ಪ್ರೊ| ಟಿ.ವಿ. ಕಟ್ಟೀಮನಿ ಅವರು ಈ ಸಮಿತಿಯಲ್ಲಿದ್ದಾರೆ.

ಪ್ರಸ್ತುತ, ಕಟ್ಟೀಮನಿಯವರು ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಗಳಾಗಿದ್ದಾರೆ.  ಇವರೂ ಸೇರಿದಂತೆ ಒಟ್ಟು 12 ಸದಸ್ಯರು ಈ ಸಮಿತಿಯಲ್ಲಿದ್ದಾರೆ. ಸಿಬಿಎಸ್‌ಇ ಪಠ್ಯ ಮತ್ತು ಪಠ್ಯಕ್ರಮದ ರೂಪುರೇಷೆಗಳುಳ್ಳ ರಾಷ್ಟ್ರೀಯ ಪಠ್ಯಕ್ರಮ ಫ್ರೇಂವರ್ಕ್‌ (ಎನ್‌ಸಿಎಫ್) ಎಂಬ ಕರಡು ಪ್ರತಿಯನ್ನು ಸಿದ್ಧಗೊಳಿಸಿ, ಅದನ್ನು ಈ ಸಮಿತಿ ಸರಕಾರಕ್ಕೆ ಸಲ್ಲಿಸಲಿದೆ.

ಈ ಹಿಂದೆ, ಎನ್‌ಸಿಇಆರ್‌ಟಿ ಪಠ್ಯ ಮತ್ತು ಪಠ್ಯಕ್ರಮ 2005ರಲ್ಲಿ ಪರಿಷ್ಕೃತವಾಗಿತ್ತು. ಇದಕ್ಕೂ ಹಿಂದೆ, 1975, 1988 ಮತ್ತು 2000ನೇ ವರ್ಷದಲ್ಲಿ ಪರಿಷ್ಕೃತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next