Advertisement

ಪೆಗಾಸಸ್ ಪ್ರಕರಣವನ್ನು ಬಗೆಹರಿಸಲಿ |ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ : ಖರ್ಗೆ ಗುಡುಗು

03:59 PM Jul 27, 2021 | Team Udayavani |

ನವ ದೆಹಲಿ : ಪೆಗಾಸಸ್ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆಯನ್ನು ತೋರಿಸುತ್ತಿದೆ. ಪೆಗಾಸಸ್ ಚರ್ಚೆಯ ಬಗ್ಗೆ ಒಂದಿನಿತೂ ಗಮನ ಕೇಂದ್ರ ಸರ್ಕಾರ ನೀಡುತ್ತಿಲ್ಲವೆಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಕೇಂದ್ರ ಸರ್ಕಾರ ಸರ್ವಾಧೀಕಾರವನ್ನು ಮಾಡುತ್ತಿದೆ.  ಪೆಗಾಸಸ್ ಸ್ಪೈವೇರ್ ಮೂಲಕ ದೇಶದ ಪ್ರಮುಖ ಪತ್ರಿಕೋದ್ಯಮಿಗಳು, ವಿರೋಧ ಪಕ್ಷಗಳ ನಾಯಕರನ್ನು ಒಳಗೊಂಡು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧಿಶರು, ಸೇನಾಧಿಕಾರಿಗಳ ವಿರುದ್ಧ ಈ ಅಸ್ತ್ರವನ್ನು ಬಳಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ : ಐಎಂಡಿಬಿ ರೇಟಿಂಗ್ ನಲ್ಲಿ ಟಾಪ್ : ಜೋರಾಗಿದೆ ಕಿಚ್ಚನ ‘ವಿಕ್ರಾಂತ್ ರೋಣ’ ಕ್ರೇಜ್

ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವಿಶ್ವದ ಯಾವ ದೇಶದಲ್ಲಿಯೂ  ಹೀಗೆ ಮಾಡುವುದಿಲ್ಲ. ಕಂಪ್ಯೂಟರ್ ಮೂಲ ದಾಖಲೆಗಳೊಂದಿಗೆ ಟ್ಯಾಂಪರಿಂಗ್, ಹ್ಯಾಕಿಂಗ್ ವಿರುದ್ಧವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ ದೇಶದಲ್ಲಿ ಇದೆ. ಆದರೇ, ಕೇಂದ್ರ ಸರ್ಕಾರ ಪತ್ರಿಕೋದ್ಯಮಿಗಳು, ರಾಜಕೀಯ ವಿರೋಧ ಪಕ್ಷದ ನಾಯಕರು, ಸುಪ್ರೀಂ ಕೋರ್ಟ್ ವಿರುದ್ಧ ಬೇಹುಗಾರಿಕೆ ಮಾಡಲು ಅನುಮತಿಸುತ್ತದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ದೇಶದಲ್ಲಿ ಪ್ರಧಾನಿ ಸರ್ವಾಧಿಕಾರವನ್ನು ಮಾಡುತ್ತಿದ್ದಾರೆ. ಪೆಗಾಸಸ್ ವಿಚಾರದ ಕುರಿತಾಗುತ್ತಿರುವ ಚರ್ಚೆಯನ್ನು ಬಗೆಹರಿಸುವುದಕ್ಕೆ ಯಾವ ರೀತಿಯಿಂದಲೂ ಪ್ರಯತ್ನಿಸುತ್ತಿಲ್ಲ. ನಾವೆಲ್ಲರೂ  ಈ ಪ್ರಕರಣದ ವಿಚಾರವಾಗಿ ಹೋರಾಟ ಮಾಡುತ್ತೇವೆ ಎಂದು ಸಿಡಿದಿದ್ದಾರೆ.

Advertisement

ದೇಶದ ಪ್ರಮುಖ 40 ಮಂದಿ ಪತ್ರಕರ್ತರನ್ನು ಒಳಗೊಂಡು ದೇಶಧ ಪ್ರಮುಖ ವಿರೋಧ ಪಕ್ಷದ ನಾಯಕರು, ಸುಪ್ರೀಂ ಕೋರ್ಟ್ ಹಾಗೂ ಸೇನಾಧಿಕಾರಿಗಳ ವಿರುದ್ಧ  ಈ ಅಸ್ತ್ರವನ್ನು ಬಳಸಲಾಗಿದೆ ಎಂದು ಕಾಂಗ್ರೆಸ್ ಸೇರಿ ಇತರೆ ವಿರೋಧ ಪಕ್ಷಗಳು ಆರೋಪ ಮಾಡಿವೆ.

ಇದನ್ನೂ ಓದಿ : ಕಾಂಗ್ರೆಸ್ ನೊಂದಿಗೆ ಗೋವಾ ಫಾರ್ವಾರ್ಡ್ ಪಕ್ಷ ಚುನಾವಣಾ ಪೂರ್ವ ಮೈತ್ರಿ : ವಿಜಯ್ ಸರ್ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next