Advertisement
ರೆಮಿಡಿಸಿವಿರ್ ಸೇರಿದಂತೆ ಅಗತ್ಯ ಔಷಧಗಳ ದಾಸ್ತಾನು, ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಗೆ ಕ್ರಮ ಹಾಗೂ ದಕ್ಷಿಣ ದಿಲ್ಲಿಯಲ್ಲಿರುವ ಜಗತ್ತಿನ ಅತೀ ದೊಡ್ಡ ತಾತ್ಕಾಲಿಕ ಕೋವಿಡ್ ಕೇರ್ ಕೇಂದ್ರ ಸೇರಿದಂತೆ ದೇಶದ ವಿವಿಧ ಕೇಂದ್ರಗಳಿಗೆ ಮರುಜೀವ ನೀಡುವ ಕೆಲಸವನ್ನು ಸಿಎಪಿಎಫ್ ಯೋಧರು ಶುರು ಮಾಡಿದ್ದಾರೆ.
Related Articles
Advertisement
ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನ ಹೊಡೆದುರುಳಿಸಿದ ಸೇನೆ
ಸುಪ್ರೀಂ ಕೋರ್ಟ್‌ನಲ್ಲಿ 2 ವಾರ ಕಾಲ ಭೌತಿಕ ವಿಚಾರಣೆ ಇಲ್ಲಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮತ್ತೆ ವರ್ಚುವಲ್ ವಿಚಾರಣೆಯತ್ತ ಮುಖ ಮಾಡಿದೆ. ಮುಂದಿನ 2 ವಾರಗಳ ಕಾಲ ಭೌತಿಕ ವಿಚಾರಣೆ ನಡೆಸದೇ ಇರಲು ನಿರ್ಧರಿಸಿದೆ. 2 ವಾರಗಳ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದೆ. 3ನೇ ಡೋಸ್ ಶೇ.88 ಪರಿಣಾಮಕಾರಿ
ಕೊರೊನಾ ಲಸಿಕೆಯ ಮೂರನೇ ಡೋಸ್ ಒಮಿಕ್ರಾನ್ ರೂಪಾಂತರಿಯ ವಿರುದ್ಧ ಶೇ.88 ರಷ್ಟು ಪರಿಣಾಮಕಾತ್ವ ಹೊಂದಿದೆ ಎಂದು ಯುಕೆಯಲ್ಲಿ ನಡೆಸಲಾದ ಅಧ್ಯಯನವೊಂದರಿಂದ ತಿಳಿದುಬಂದಿದೆ. ಬೂಸ್ಟರ್ ಡೋಸ್ ವ್ಯಕ್ತಿಯ ಪ್ರತಿಕಾಯವನ್ನು ಹೆಚ್ಚಳ ಮಾಡುತ್ತದೆ. ಎರಡನೇ ಡೋಸ್‌ಗೆ ಹೋಲಿಸಿದರೆ 3ನೇ ಡೋಸ್ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಯುಕೆ ಆರೋಗ್ಯ ಭದ್ರತಾ ಸಂಸ್ಥೆಯ ವರದಿ ಹೇಳಿದೆ. ಜತೆಗೆ, ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು ಅಥವಾ ತುರ್ತು ನಿಗಾ ಘಟಕಕ್ಕೆ ದಾಖಲಾಗುವ ಪ್ರಮಾಣ ಶೇ.50ಕ್ಕಿಂತ ಕಡಿಮೆಯಿದೆ ಎಂಬ ಸಮಾಧಾನಕರ ವಿಚಾರವನ್ನೂ ವರದಿ ತಿಳಿಸಿದೆ. ಮಧ್ಯಪ್ರದೇಶಕ್ಕೆ 3ನೇ ಅಲೆ ಬಂದಾಯಿತು!
“ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಬಂದಾಗಿದೆ. ಇನ್ನೇನಿದ್ದರೂ ಎಚ್ಚರಿಕೆಯಿಂದ ಇರುವುದಷ್ಟೇ ನಮಗಿರುವ ದಾರಿ.’ ಹೀಗೆಂದು ಹೇಳಿರುವುದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್. ಜನರ ಸಕ್ರಿಯ ಪಾಲುದಾರಿಕೆ ಇದ್ದರಷ್ಟೇ ಸೋಂಕಿನ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡಲು ಸಾಧ್ಯ. 3ನೇ ಅಲೆಯನ್ನು ಎದುರಿಸಲು ಎಲ್ಲ ರೀತಿಯ ಕ್ರಮಗಳನ್ನು ಸರಕಾರ ಕೈಗೊಂ ಡಿದೆ. ಆದರೆ ಜನರು ಎಲ್ಲ ನಿಯಮಗಳನ್ನೂ ಪಾಲಿಸುವ ಮೂಲಕ ಸಹಕಾರ ನೀಡಬೇಕು ಎಂದೂ ಚೌಹಾಣ್ ಮನವಿ ಮಾಡಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಬಹುತೇಕ ಸೋಂಕಿತರಲ್ಲಿ ರೋಗಲಕ್ಷಣವೇ ಇಲ್ಲ ಅಥವಾ ಅಲ್ಪಪ್ರಮಾಣದ ಲಕ್ಷಣಗಳಷ್ಟೇ ಇವೆ. ಆಸ್ಪತ್ರೆಗೆ ಸೇರಬೇಕಾದ ಅಗತ್ಯವೂ ಕಂಡುಬಂದಿಲ್ಲ. ಹೀಗಾಗಿ ಅನಗತ್ಯ ಆತಂಕ ಬೇಕಾಗಿಲ್ಲ.
– ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ