ಹೊಸದಿಲ್ಲಿ: ಕ್ಯಾಲೆಂಡರ್ ವರ್ಷದಲ್ಲಿ ಷೇರು ಅಥವಾ ಇತರ ಹೂಡಿಕೆಗಳಲ್ಲಿನ ಒಟ್ಟು ವಹಿವಾಟುಗಳು ಆರು ತಿಂಗಳ ಮೂಲ ವೇತನವನ್ನು ಮೀರಿದರೆ, ಈ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಕೇಂದ್ರ ಸರಕಾರವು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಸೂಚಿಸಿದೆ.
1968ರ ಅಖೀಲ ಭಾರತ ಸೇವೆಗಳು(ನಡತೆ) ನಿಯಮಗಳು ಅಥವಾ ಎಐಎಸ್ ನಿಯಮ 16(4)ರ ಅಡಿ ಸಲ್ಲಿಸಬೇಕಾದ ಮಾಹಿತಿಗೆ ಹೆಚ್ಚುವರಿಯಾಗಿ ಈ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಈ ನಿಯಮಗಳು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಅನ್ವಯವಾಗುತ್ತದೆ.
“ಅಖೀಲ ಭಾರತ ಸೇವೆಗಳ ಸದಸ್ಯರಿಗೆ ಸಂಬಂಧಿಸಿದಂತೆ ಯಾವುದೇ ಹೂಡಿಕೆಗಳಲ್ಲಿ ವಹಿವಾಟುಗಳ ಮೇಲೆ ನಿಗಾ ಇಡಲು ಆಡಳಿತಾತ್ಮಕ ಅಧಿಕಾರಿಗಳಿಗೆ ಅನುವು ಮಾಡಿಕೊಡುವ ದೃಷ್ಟಿಯಿಂದ, ಪ್ರತೀ ವರ್ಷ ನಿಗದಿತ ಪ್ರಾಧಿಕಾರಕ್ಕೆ ಲಗತ್ತಿಸಲಾದ ಪೊ›ಫಾರ್ಮಾದಲ್ಲಿ ಕಳುಹಿಸಬೇಕು,’ ಎಂದು ಕೇಂದ್ರ ಸರಕಾರದ ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಆದೇಶ ಹೊರಡಿಸಲಾಗಿದೆ.