Advertisement

ಖಾಸಗಿ ವಿಮಾನದಲ್ಲಿ ಆಗಮಿಸಲು ಕೇಂದ್ರ ಸೂಚನೆ?

06:08 AM Jun 05, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ಕೇಂದ್ರ ಸರ್ಕಾರ ಶಾಕ್‌ ನೀಡಿದೆ. ರಾಜ್ಯಕ್ಕೆ ವಾಪಸ್‌ ಬರಬೇಕೆಂದರೆ ಚಾರ್ಟರ್‌ ಫ್ಲೈಟ್‌ (ಖಾಸಗಿ ವಿಮಾನ) ಮಾಡಿಕೊಂಡು ಬರುವಂತೆ ಸೂಚಿಸಿದ್ದು, ಅರಬ್‌ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿ  ಕನ್ನಡಿಗರಲ್ಲಿ ಆತಂಕ ಮೂಡಿಸಿದೆ.ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಶೇ. 60 ರಷ್ಟು ಕನ್ನಡಿಗರು ಗಲ್ಫ್‌ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ.

Advertisement

ಈಗ ಕೇಂದ್ರ ಸರ್ಕಾರ  ಜಾರಿಗೊಳಿಸಿರುವ ಒಂದೇ  ಭಾರತ್‌ ಮಿಷನ್‌ ಅಡಿಯಲ್ಲಿ ದುಬೈ, ಕತಾರ್‌, ಸೌದಿ ಅರೇಬಿಯಾ, ಬಹರೇನ್‌, ಕುವೈತ್‌, ಮಸ್ಕತ್‌, ಶಾರ್ಜಾ, ಅಬು  ದಾಭಿ ದೇಶಗಳಿಂದ ಅಗತ್ಯಕ್ಕೆ ತಕ್ಕಷ್ಟು ವಿಮಾನ ಸೇವೆ ಒದಗಿಸಿಲ್ಲ. ದುಬೈನಲ್ಲಿ 2500, ಕತಾರ್‌ ನಲ್ಲಿ 4000, ಸೌದಿ  ಅರೇಬಿಯಾ, ಬಹರೇನ್‌ ಕುವೈತ್‌ ಸೇರಿದಂತೆ ಇತರ ಅರಬ್‌ ರಾಷ್ಟ್ರಗಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡಿಗರು ವಾಪಸ್‌ ಬರಲು ನೋಂದಣಿ ಮಾಡಿಕೊಂಡು ವಿಮಾನದ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಈಗಾಗಲೇ ಪ್ರವಾಸಕ್ಕೆ  ತೆರಳಿ ಸಿಲುಕಿಕೊಂಡವರು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ತುರ್ತಾಗಿ ವಾಪಸ್‌ ಬರುವವರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಅವರಿಗೆ ತಕ್ಷಣಕ್ಕೆ ವಿಮಾನ ಸೇವೆ ಒದಗಿಸದೆ ಖಾಸಗಿ ವಿಮಾನ ವ್ಯವಸ್ಥೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ  ನೀಡಿದೆ ಎಂದು ಹೇಳಲಾಗಿದೆ. ದುಬೈ ಹಾಗೂ ಕತಾರ್‌ ನಲ್ಲಿರುವ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ  ಸಚಿವರಾದ ಸುರೇಶ್‌ ಅಂಗಡಿ ಹಾಗೂ ಡಿ.ವಿ.ಸದಾ ನಂದ ಗೌಡ  ಅವರ ಮೂಲಕ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್‌ ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತ ಕೆಲ ಉದ್ಯಮಿಗಳು ತಮ್ಮ ಸಂಸ್ಥೆಯ ನೌಕರರನ್ನು ರಾಜ್ಯಕ್ಕೆ  ಕರೆತರಲು ಖಾಸಗಿ ವಿಮಾನ ಸೇವೆ ವ್ಯವಸ್ಥೆ ಮಾಡಿದ್ದು ದುಬೈ ಹಾಗೂ ಸೌದಿ ಅರೇಬಿಯಾದಿಂದ 2 ಖಾಸಗಿ ವಿಮಾನಗಳು  ಮಂಗಳೂರಿಗೆ ಆಗಮಿಸಿವೆ. ಆದರೆ, ಯಾರಾದರೂ ಖಾಸಗಿ ವಿಮಾನ ಸೇವೆ ಒದಗಿಸಿದರೆ ಅವರಿಗೆ ಟಿಕೆಟ್‌ ಹಣ  ಕೊಟ್ಟು ರಾಜ್ಯಕ್ಕೆ ವಾಪಸ್‌ ಬರಲು ಸಾಮಾನ್ಯ ಜನರೂ ಸಿದ್ದರಾಗಿದ್ದು, ಯಾರಾದರೂ ಖಾಸಗಿ ವಿಮಾನ ಸೇವೆಯನ್ನಾ ದರೂ ಒದಗಿಸಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ದುಬೈ ಅಥವಾ ಇತರೆ ಅರಬ್‌ ರಾಷ್ಟ್ರಗಳಿಂದ ಒಂದು ಖಾಸಗಿ ವಿಮಾನ ಸೇವೆ ಒದಗಿಸಲು ಸುಮಾರು 45 ರಿಂದ 50 ಲಕ್ಷ ರೂ. ಖರ್ಚಾಗುತ್ತದೆ.

ರಾಜ್ಯಕ್ಕೆ ಬರಲು ಉದ್ಯೋಗ ಕಳೆದುಕೊಂಡವರು, ಗರ್ಭಿಣಿಯರು, ಹಿರಿಯರು ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಖಾಸಗಿ ವಿಮಾನ ಮಾಡಿಕೊಂಡು ಬನ್ನಿ ಎನ್ನುತ್ತಿದೆ. ಸಂಕಷ್ಟದಲ್ಲಿರುವ ಜನರು ಹೇಗೆ ವಿಮಾನ ಮಾಡಿಕೊಂಡು ಬರಲು ಸಾಧ್ಯ? ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು. 
-ಚಂದ್ರಶೇಖರ ಲಿಂಗದಳ್ಳಿ, ದುಬೈ ಬಸವ ಸಮಿತಿ ಸಂಚಾಲಕ

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಹಾಕುತ್ತ ಜಾರಿಕೊಳ್ಳುತ್ತಿದ್ದಾರೆ. ಮುಂಬೈನಿಂದ ಬಂದವರಿಂದ ಕರ್ನಾಟಕದಲ್ಲಿ ಕೋವಿಡ್‌ 19 ಹೆಚ್ಚಾಗಿದೆ ವಿನಹ ಗಲ#… ರಾಷ್ಟ್ರಗಳಿಂದ ಬಂದವರಿಂದಲ್ಲ.
-ಸುಬ್ರಮಣ್ಯ ಹೆಬ್ಟಾಗಿಲು, ಕತಾರ್‌ ಕನ್ನಡ ಸಂಘದ ಸದಸ್ಯ

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next