Advertisement

ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ… ಬಿಜಿಪಿ ನಾಯಕರ ಜೊತೆ ಹೈ ಪ್ರೊಫೈಲ್ ಮೀಟಿಂಗ್

09:23 AM Feb 11, 2024 | Team Udayavani |

ಮೈಸೂರು: ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಇಂದು (ರವಿವಾರ) ಮುಂಜಾನೆ 2,40 ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

Advertisement

ಈ ವೇಳೆ ಅವರನ್ನು ಜಿಲ್ಲಾಡಳಿತದ ವತಿಯಿಂದ ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು.

ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ ಅವರು ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಿದರು. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ,ಸಂಸದ ಪ್ರತಾಪ ಸಿಂಹ, ಶಾಸಕರಾದ ಶ್ರೀ ವತ್ಸ,ಮಾಜಿ ಶಾಸಕರಾದ ನಾಗೇಂದ್ರ, ಹರ್ಷವರ್ಧನ್ ನಗರ ಪೊಲೀಸ್ ಆಯುಕ್ತರಾದ ರಮೇಶ್, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮತ್ತಿತರರಿದ್ದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿ:
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿ ಆಗಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ. ಮಧ್ಯಾಹ್ನ 12 ಗಂಟೆಗೆ ಸುತ್ತೂರಿಗೆ ಆಗಮೀಸಲಿದ್ದಾರೆ. ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ 49 ಕೊಠಡಿಗಳ ಸುಸಜ್ಜಿತ ಅಥಿತಿಗೃಹವನ್ನು ಉದ್ಘಾಟನೆ ಮಾಡಲಿದ್ದಾರೆ.
ಏಕ ಕಾಲದಲ್ಲಿ 850ಕ್ಕೂ ಹೆಚ್ಚು ಭಕ್ತರು ಉಳಿಯಲು ವ್ಯವಸ್ಥೆ ಇರುವ ಅಥಿತಿ ಗೃಹವಾಗಿದೆ. ಇದಾದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕೇಂದ್ರ ಗೃಹ ಸಚಿವರ ಆಗಮನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಎಸ್‌ಪಿಜಿ ಭದ್ರತೆ ಒದಗಿಸಲಾಗಿದೆ.

ಸುತ್ತೂರು ಕ್ಷೇತ್ರದ ಕಾರ್ಯಕ್ರಮ ಮುಗಿಸಿಡಾ ಬಳಿಕ ಕೇಂದ್ರ ಸಚಿವರು ಮೈಸೂರಿನಲ್ಲಿ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ. ಸಿಎಂ ತವರು ಜಿಲ್ಲೆಯಿಂದಲೇ‌ ಚುನಾವಣಾ ಚಾಣಕ್ಯ ಅಮಿತ್ ಶಾ ರಣ ಕಹಳೆ ಮೊಳಗಿಸಲಿದ್ದಾರೆ ಎನ್ನಲಾಗಿದೆ.

Advertisement

ಇಂದು ಅಮಿತ್ ಶಾ ನೇತೃತ್ವದಲ್ಲಿ ಎರಡು ಪ್ರಮುಖ ಸಭೆಗಳು ನಡೆಯಲಿದೆ ಎನ್ನಲಾಗಿದೆ. ಅದರಂತೆ ಮಧ್ಯಾಹ್ನ 3 ಗಂಟೆಯಿಂದ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ರಾಜ್ಯ ನಾಯಕರ ಜೊತೆ ಮೀಟಿಂಗ್ ನಡೆಯಲಿದ್ದು ಇದಾದ ಬಳಿಕ ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲಾ ಪ್ರಮುಖ ಬಿಜೆಪಿ ಮುಖಂಡರುಗಾಲ ಜೊತೆ ಸಭೆ ನಡೆಯಲಿದೆ ಎನ್ನಲಾಗಿದೆ.

ನಂತರ ಐದು ಜಿಲ್ಲೆಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು ಇದರಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಿಂದ ಅಧ್ಯಕ್ಷ, ಕಾರ್ಯದರ್ಶಿ, ಸಂಘಟನಾ ಮುಖ್ಯಸ್ಥ ಸೇರಿ ಪ್ರಮುಖರು ಸೇರಿ 20 ಮಂದಿ ಭಾಗಿಯಾಗಲಿದ್ದಾರೆ.

ನಾಲ್ಕು ಲೋಕಸಭಾ ಕ್ಷೇತ್ರದ ಗೆಲುವಿನ ಲೆಕ್ಕಾಚಾರದಲ್ಲಿ ಹೈ ಪ್ರೊಫೈಲ್ ಮೀಟಿಂಗ್. ಹಾಸನ, ಮಂಡ್ಯ, ಮೈಸೂರು ಲೋಕಸಭಾ ಕ್ಷೇತ್ರ ಬಿಜೆಪಿಗೆ ಸುಲಭವಾಗಿ  ಗೆಲುವು ಸಾಧ್ಯತೆ. ಚಾಮರಾಜನಗರ ಕ್ಷೇತ್ರದ ಗೆಲುವಿನ ರಣತಂತ್ರ ನಡೆಸುವ ಸಭೆ. ಸಭೆಯಲ್ಲಿ ಘಟಾನುಗಟಿಗಳು ಭಾಗಿ. ಹಳೆ ಮೈಸೂರು ಭಾಗದ ಸಂಪೂರ್ಣ ವಿವರ ಅಮಿತ್ ಷಾ ಅವಲೋಕನ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Tragedy: ಜಾತ್ರೆಯಲ್ಲಿ ನೆರೆದಿದ್ದವರ ಮೇಲೆ ಹರಿದ ಟ್ಯಾಂಕರ್, 3ಮೃತ್ಯು, 20ಕ್ಕೂ ಹೆಚ್ಚು ಗಾಯ

Advertisement

Udayavani is now on Telegram. Click here to join our channel and stay updated with the latest news.

Next