Advertisement

ಸಿನೆಮಾ ಕ್ಷೇತ್ರದಲ್ಲೂ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡೋಣ: ಸಚಿವ ಅನುರಾಗ ಠಾಕೂರ್

08:46 PM Nov 20, 2022 | Team Udayavani |

ಪಣಜಿ: ಪ್ರಸಕ್ತ 53 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. 72 ದೇಶಗಳ 250 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದೆ.

Advertisement

ಗೋವಾ ಎಂದರೆ “ಗೋ-ಆ” ಹೋಗಿ ಬನ್ನಿ ಎಂದರ್ಥ. ಸಿನೆಮಾ ಕ್ಷೇತ್ರದಲ್ಲಿಯೂ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡೋಣ. ಇದಕ್ಕಾಗಿ ನಮ್ಮ ಮೇಲೆ ನಮಗೆ ವಿಶ್ವಾಸ ಬಹಳ ಮುಖ್ಯ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ ಠಾಕೂರ್ ನುಡಿದರು.

ಗೋವಾದ ಪಣಜಿ ಸಮೀಪದ ಬಾಂಬೋಲಿಂ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ 53 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.

ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ನೆರವೇರಿಸಿದ ಗೋವಾ ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳೆ ಮಾತನಾಡಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಭಾರತೀಯ ಸಾಮಾಜಿಕ ಜೀವನದ ಪ್ರತಿಬಿಂಬವಾಗಿದೆ, ಎಂದು ಹೇಳಿ ಚಲನಚಿತ್ರೋತ್ಸವಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ಗೋವಾ ರಾಜ್ಯವು ಚಲನಚಿತ್ರ ಚಿತ್ರೀಕರಣಕ್ಕೆ ಒಂದು ಉತ್ತಮ ತಾಣವಾಗಿದೆ. ಇದರಿಂದಾಗಿ ಹೊಸ ಚಿತ್ರ ನಿಮಾಣಕ್ಕಾಗಿ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಛಾಯಾಗ್ರಾಹಕರು ಗೋವಾಕ್ಕೆ ಆಗಮಿಸಬೇಕು. ಚಲನಚಿತ್ರ ನಿರ್ಮಾಣಕ್ಕೆ ಗೋವಾ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಗೋವಾ ರಾಜ್ಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯ ಖಾಯಂ ಸ್ಥಳವಾಗಿದೆ. ಇದಕ್ಕಾಗಿ ಪ್ರತ್ಯೇಕ ವೇದಿಯನ್ನು ಸಿದ್ಧಪಡಿಸಲಾಗುತ್ತಿದ್ದ 2025 ರ ವೇಳೆಗೆ ಉದ್ಘಾಟನೆಗೊಳ್ಳಲಿದೆ ಎಂದರು.

Advertisement

ಇದನ್ನೂ ಓದಿ :ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು

ಬಾಲಿವುಡ್ ಖ್ಯಾತಿಯ ಅಜಯ್ ದೇವಗನ್, ಸುನೀಲ್ ಶೆಟ್ಟಿ, ಮನೋಜ್ ವಾಜಪೇಯಿ, ಪರೇಶ್ ರಾವಲ್ ರವರನ್ನು ಸನ್ಮಾನಿಸಲಾಯಿತು.

ಸ್ಪ್ಯಾನಿಷ್ ಚಲನಚಿತ್ರ ನಿರ್ಮಾಪಕ ಕಾರ್ಲೋಸ್ ಸೌರಾ ಅವರನ್ನು ಸತ್ಯಜಿತ್ ‘ರೇ ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು. ದೇಶ ವಿದೇಶಿಯ ಚಲನಚಿತ್ರ ಕ್ಷೇತ್ರದ ಕಲಾವಿದರು. ಪಾಲ್ಗೊಂಡಿದ್ದರು.

ಪ್ರಪಂಚದಾದ್ಯಂತ ಬೆಳ್ಳಿ ಪ್ರಪಂಚದ ಶಿಖರವಾದ ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉಧ್ಘಾಟನೆಗೊಂಡಿದ್ದು, ಈ ವರ್ಷ, 72 ಕ್ಕೂ ಹೆಚ್ಚು ದೇಶಗಳ 280 ಚಿತ್ರಗಳು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಭಾರತದ 45 ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಮರಾಠಿ, ಕೊಂಕಣಿ ಮತ್ತಿತರ ಭಾಷೆಗಳ ಚಿತ್ರಗಳನ್ನು ಚಲನಚಿತ್ರ ಪ್ರೇಮಿಗಳು ವೀಕ್ಷಿಸಬಹುದಾಗಿದೆ.  ಪ್ರಸಕ್ತ ವರ್ಷ ಫ್ರಾನ್ಸ್ ಫೋಕಸ್ ಕಂಟ್ರಿ ದೇಶವಾಗಿದೆ, ಇದರಿಂದಾಗಿ ಫ್ರಾನ್ಸ ದೇಶದ ಹಲವು ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ  ನವೆಂಬರ್ 28 ರವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next