Advertisement

ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಬಹುಮಾನ ಪ್ರಕಟ

10:44 PM Feb 25, 2020 | Lakshmi GovindaRaj |

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಮಂಗಳವಾರ 2019ರ ಸಾಲಿನ ವಿವಿಧ ಭಾಷೆಯ “ಅನುವಾದ ಬಹುಮಾನ’ ಪ್ರಕಟಿಸಿದೆ. ಕನ್ನಡ ಹೊರತು ಪಡಿಸಿ ಉಳಿದ ಭಾಷೆಯ ಕೃತಿ ಮತ್ತು ಅನುವಾದಕರ ಹೆಸರನ್ನು ಘೋಷಿಸಿದೆ. ಅನುವಾದಕಿ ಜಯಶ್ರೀ ಶಾನಭೋಗ್‌ ಕೊಂಕಣಿ ಭಾಷೆಗೆ ಅನುವಾದ ಮಾಡಿರುವ ಗೋಪಾಲ ಕೃಷ್ಣ ಪೈ ಅವರ ಕನ್ನಡ ಕಾದಂಬರಿ “ಸ್ವಪ್ನ ಸಾರಸ್ವತ’ ಕಾದಂಬರಿ.

Advertisement

ಸುನೇತ್ರಾ ಜೋಗ್‌ ಅವರು ಕಾದಂಬರಿಗಾರ್ತಿ ಸುಧಾಮೂರ್ತಿ ಅವರ “ದಿ ಮ್ಯಾಜಿಕ್‌ ಆಫ್ ಲಾಸ್ಟ್‌ ಟೆಂಪಲ್‌ ‘ಎಂಬ ಆಂಗ್ಲ ಕಾದಂಬರಿಯನ್ನು ಕೊಂಕಣಿ ಭಾಷೆಗೆ ಅನುವಾದ ಮಾಡಿದ್ದ ಈ ಪುಸ್ತಕವೂ ಬಹುಮಾನಕ್ಕೆ ಆಯ್ಕೆಯಾಗಿದೆ. ಹಾಗೆಯೇ ನಿರ್ಮಲ್‌ಕಂಠಿ ಭಟ್ಟಾಚಾರ್ಯ ಅವರು ಬಂಗಾಳಿ ಭಾಷೆಗೆ ಭಾಷಾಂತರಿಸಿದ ಯು.ಆರ್‌.ಅನಂತಮೂರ್ತಿ ಅವರ “ಸಂಗ್ರಹ ಕಥನಗಳು’ ಪುಸ್ತಕಕ್ಕೆ ಬಹುಮಾನ ದೊರೆತಿದೆ.

ಆಂಗ್ಲ ಭಾಷೆಯ ಲೇಖಕ ಸಸಾನ್‌ ಡ್ಯಾನಿಲ್‌ ಅವರು ಕನ್ನಡದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ “ಕುಸುಮ ಬಾಲೆ’ ಕಾದಂಬರಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದು, ಈ ಕೃತಿಗೂ ಬಹುಮಾನ ದೊರೆತಿದೆ. ವಿವೇಕ್‌ಶಾನ್‌ಭೋಗ್‌ ಅವರ ಕನ್ನಡದ “ಗಾಚರ್‌ ಗೋಚರ್‌’ ಕಾದಂಬರಿಯನ್ನು ಶ್ರೀನಾಥ್‌ ಪೇರೂರ್‌ ಅವರು ಇಂಗ್ಲಿಷ್‌ಗೆ ಅನುವಾದ ಮಾಡಿದ್ದು, ಅದಕ್ಕೂ ಬಹುಮಾನ ದೊರೆತಿದೆ. ಅನುವಾದ ಬಹುಮಾನ 50 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next